ಸೈನಿಕರ ತ್ಯಾಗ, ಸೇವೆ ಅಪಾರ

Untitled design(8)
ಮಾಲಗಿತ್ತಿ ಗ್ರಾಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹನಮಗೌಡ ಗೌಡರ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು. ಗದಗ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾಯದರ್ಶಿ ಶಿವಾನಂದ ಎಸ್. ಪಟ್ಟಣಶೆಟ್ಟರ, ಪ್ರಮುಖರಾದ ಸ್ವಾಮಿರಾವ್ ದೇಸಾಯಿ, ಪೃಥ್ವಿರಾಜ ದೇಸಾಯಿ, ಶರಣಗೌಡ ಗೌಡ್ರ, ಶಿವಾನಂದಪ್ಪ ಉಳ್ಳಾಗಡ್ಡಿ, ಮಾರುತೆಪ್ಪ ಹೂಗಾರ, ನಿವೃತ್ತ ಯೋಧರಾದ ಅಶೋಕ ಕೆರಳ್ಳಿ, ಶರಣಪ್ಪ ಅಂಗಡಿ ಇತರರಿದ್ದರು.
Published on

ಹನುಮಸಾಗರ: ಸೈನಿಕರ ತ್ಯಾಗ, ಸೇವೆ ಅಮೂಲ್ಯವಾದದ್ದು. ದೇಶಕ್ಕೆ ಅನ್ನ ನೀಡುವ ರೈತರ ಹಾಗೂ ಗಡಿ ಕಾಯುವ ಸೈನಿಕರ ಋಣ ಪ್ರತಿಯೊಬ್ಬ ಭಾರತೀಯ ಪ್ರಜೆ ಮೇಲಿದೆ ಎಂದು ಗದಗ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾಯದರ್ಶಿ ಶಿವಾನಂದ ಎಸ್. ಪಟ್ಟಣಶೆಟ್ಟರ ಹೇಳಿದರು.

ಸಮೀಪದ ಮಾಲಗಿತ್ತಿ ಗ್ರಾಮದಲ್ಲಿ ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಸೈನಿಕ ಹನಮಗೌಡ ಗೌಡರ ಅವರಿಗೆ ಅಭಿನಂದನೆ ಹಾಗೂ ಸ್ವಾಗತ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ಸೈನಿಕರು ದೇಶ ಸೇವೆಗಾಗಿ ಕುಟುಂಬ ಬಿಟ್ಟು ಮಳೆ, ಬಿಸಿಲು, ಗಾಳಿ, ಚಳಿ ಲೆಕ್ಕಿಸದೆ ನಿರಂತರ ದುಡಿಯುತ್ತಾರೆ. ಅವರ ಸೇವೆ ಅಪಾರವಾಗಿದೆ. ಮಾಲಗಿತ್ತಿ ಗ್ರಾಮದಲ್ಲಿ ಬಹಳಷ್ಟು ಜನ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕ ಹನಮಗೌಡ ಗೌಡರ, 17 ವರ್ಷ ಸೇವೆ ಮಾಡಿದ್ದು ಹೆಮ್ಮೆ ಅನಿಸುತ್ತಿದೆ. ಈಗಿನ ಯುವಕರಿಗೆ ಅಗ್ನಿಪಥ್ ಅಡಿಯಲ್ಲಿ ಸೈನ್ಯ ಸೇರಲು ಒಳ್ಳೆಯ ಅವಕಾಶ ಸಿಗುತ್ತಿದೆ. ದೇಶ ಸಂಕಷ್ಟದಲ್ಲಿದ್ದಾಗ ಯುವಕರನ್ನು ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯ ಆಲೋಚನೆ ಮಾಡಿದ್ದಾರೆ. ಇದು ಒಳ್ಳೆಯ ವಿಧಾನ ಎಂದರು.

ಗ್ರಾಮದ ಮುಖಂಡರಾದ ಸ್ವಾಮಿರಾವ್ ದೇಸಾಯಿ, ಪೃಥ್ವಿರಾಜ ದೇಸಾಯಿ, ಶರಣಗೌಡ ಗೌಡ್ರ, ಶಿವಾನಂದಪ್ಪ ಉಳ್ಳಾಗಡ್ಡಿ, ಮಾರುತೆಪ್ಪ ಹೂಗಾರ, ನಿವೃತ್ತ ಯೋಧರಾದ ಅಶೋಕ ಕೆರಳ್ಳಿ, ಶರಣಪ್ಪ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net