

ಮೈಸೂರು: ಭಾಮೀಸ್ ಫೌಂಡೇಷನ್ ವತಿಯಿಂದ ಜ.6ರ ಸಂಜೆ 6 ಗಂಟೆಗೆ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ‘ಹಾಡು ಹಳೆಯದಾದರೇನು ಭಾವ ನವ ನವೀನ’ ಕನ್ನಡ ಹಾಗೂ ಹಿಂದಿ ಹಳೆಯ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಾಧ್ಯಾಪಕರಾದ ಡಾ.ಕೆ.ಎಸ್.ಮಂಜುನಾಥ್, ಡಾ.ರಾಘವೇಂದ್ರ ಪ್ರಸಾದ್, ಪ್ರೊ.ವಿ.ಮಾಧವರಾವ್, ಸಹನಾ ಕಿರಣ್, ಪದ್ಮಜಾ ವೆಂಕಟೇಶ್, ಹಂಸಿನಿ ಮೊದಲಾದವರು ಹವ್ಯಾಸಿ ಗಾಯಕರಾಗಿದ್ದು, 20 ಕನ್ನಡ ಹಾಗೂ 5 ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡಲಿದ್ದಾರೆ.