ಸ್ವರ ಸೊಬಗು ಹಾಡು ಹಬ್ಬ ಸಂಭ್ರಮ

Oplus_131072
ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದ ಜಿ.ವಿ.ಮನೋಹರ್ ಅವರನ್ನು ಮೈಸೂರಿನ ಅರಮನೆ ಆವರಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸ್ವರಸೊಬಗು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
Published on

ಯಳಂದೂರು: ತಾಲೂಕಿನ ಗಂಗವಾಡಿ ಗ್ರಾಮದ ಜಿ.ವಿ.ಮನೋಹರ್ ಪರಿಕಲ್ಪನೆಯ ಸ್ವರ ಸೊಬಗು ಹಾಡು ಹಬ್ಬ ಕಾರ್ಯಕ್ರಮವನ್ನು ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಅರಮನೆ ಮಂಡಳಿಯಿಂದ ಯುಗಾದಿ ಸಂಗೀತೋತ್ಸವದಲ್ಲಿ ಆಯೋಜಿಸಲಾಗಿತ್ತು.

ಗ್ರಾಮೀಣ ಸೊಗಡಿನ ಹಾಡುಗಳನ್ನು ಜಿ.ವಿ.ಮನೋಹರ್ ಅವರು ಹಾಡುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು. ಅರಮನೆ ಆಡಳಿತ ಮಂಡಳಿ ನಿರ್ದೇಶಕ ಸುಬ್ರಹ್ಮಣ್ಯ, ಹೋರಾಟಗಾರ ಅಹಿಂದ ಜವರಪ್ಪ, ಎಇಇ ಶಿವಕುಮಾರ್, ಗಾಯಕರಾದ ಪುರುಷೋತ್ತಮ್ ಕಿರಗಸೂರು, ಸಿ.ಎಂ.ನರಸಿಂಹಮೂರ್ತಿ, ನಿತಿನ್ ರಾಜಾರಾಮ್ ಶಾಸ್ತ್ರಿ, ದಿವ್ಯಾ ಸಚ್ಚಿದಾನಂದ, ಹಂಸಿನಿ ಎಸ್. ಕುಮಾರ್ ಹಾಗೂ ವಾದ್ಯ ಸಂಯೋಜಕರಾದ ರಘುನಾಥ್ , ಪ್ರದೀಪ್ ಕಿಗ್ಗಾಲ್, ವಿನಯ್ ರಂಗದೊಳ್, ಕಿರಣ್, ಶರತ್ ಆತ್ಮರಾಮ್, ದರ್ಶನ್, ಮೈಸೂರಿನ ಆಕಾಶವಾಣಿ ನಿರೂಪಕ ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net