ಕಾವೇರಿ ಸಮಸ್ಯೆಗೆ ಮಾತುಕತೆಯೇ ಪರಿಹಾರ

abhishek ambarish
Published on

ಚಿತ್ರದುರ್ಗ: ಕರ್ನಾಟಕ ಹಾಗೂ ತಮಿಳುನಾಡಿನ ಸರ್ಕಾರ ಮಾತುಕತೆ ಮೂಲಕ ಕಾವೇರಿ ಸಮಸ್ಯೆ ಶೀಘ್ರ ಬಗೆಹರಿಸಿಕೊಳ್ಳಬೇಕು ಎಂದು ನಟ ಅಭಿಷೇಕ್ ಅಂಬರೀಷ್ ಒತ್ತಾಯಿಸಿದರು.

ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ನಗರದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿಯ ದರ್ಶನ ಗುರುವಾರ ರಾತ್ರಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಹಲವು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಸಿಗಲೆಂದು ಗಣಪನಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಸೆ.22ರಂದು ಮಂಡ್ಯದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಸಂಸದೆ ಸುಮಲತಾ ಅವರಿಗೂ ಈ ವಿಚಾರದಲ್ಲಿ ಜವಾಬ್ದಾರಿ ಇದ್ದು, ನಾಳಿನ ಹೋರಾಟದಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ಬಂದಿದ್ದಾರೆ ಎಂದ ಅವರು, ಸಮಸ್ಯೆಗೆ ಪರಿಹಾರ ಶೀಘ್ರ ಸಿಗಬೇಕು ಎಂದು ಹೇಳಿದರು.

ಚಿತ್ರರಂಗದ ಅನೇಕರು ಈಗಾಗಲೇ ಹೋರಾಟ ಬೆಂಬಲಿಸಿದ್ದಾರೆ. ವೇದಿಕೆ ಸಿದ್ಧವಾದ ಬಳಿಕ ಎಲ್ಲರೂ ಚಳವಳಿಯಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ ಎಂದರು.

ನಾಡು, ನುಡಿ, ಜಲ, ನೆಲದ ವಿಚಾರದಲ್ಲಿ ಚಿತ್ರರಂಗ ಒಗ್ಗೂಡಲಿದೆ. ಚಿತ್ರರಂಗ ಹಾಗೂ ಸಾರ್ವಜನಿಕ ವ್ಯಕ್ತಿಯಾಗಿ ನಾನು ನನ್ನ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಸರ್ಕಾರ ಯಾವ ನಿರ್ಧಾರ ಕೈಗೊಳ್ಳಬೇಕೆಂದು ಹೇಳುವಷ್ಟು ದೊಡ್ಡವನಲ್ಲ. ಆದರೆ, ಒಳ್ಳಯೆ ತೀರ್ಮಾನಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net