

ವಿಜಯವಾಣಿ ಸುದ್ದಿಜಾಲ ಗಜೇಂದ್ರಗಡ
ಜನ ಸಮುದಾಯದ ಎಲ್ಲ ಸವಾಲು- ಸಮಸ್ಯೆಗಳು ಹಾಗೂ ಸಂಕಟಗಳಿಗೆ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯವು ಪರಿಹಾರ ನೀಡುತ್ತದೆ ಎಂದು ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣ ಹಾಗೂ ಮಾನವೀಯ ಗುಣಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ. ರಾಮಾಯಣ ಮಾನವ ಕುಲಕ್ಕೆ ದಾರಿದೀಪವಾಗುವ ಜತೆಗೆ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯಕ ಕೊಡುಗೆಯಾಗಿದೆ ಎಂದರು.
ಪುರಸಭೆ ಸದಸ್ಯ ಶರನಪ್ಪ ಉಪ್ಪಿನಬೆಟಗೇರಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ ಮಾತನಾಡಿದರು. ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಯಮನಪ್ಪ ತಳವಾರ, ಪುರಸಭೆ ಸದಸ್ಯರಾದ ರಾಜು ಸಾಂಗ್ಲಿಕರ, ಮೂಕಪ್ಪ ನಿಡಗುಂದಿ, ನಾಗರಾಜ ತಳವಾರ, ಲಕ್ಷ್ಮಣ ತಳವಾರ, ಹುಚ್ಚಪ್ಪ ತಳವಾರ, ಭೀಮಣ್ಣ ತಳವಾರ, ಸಿದ್ದಪ್ಪ ಚೋಳಿನ, ದುರಗಪ್ಪ ಮುಧೋಳ, ರಾಘವೇಂದ್ರ ಮಂತಾ, ಫಕೀರಪ್ಪ ತಳವಾರ, ಎಂ.ಎಚ್. ರಂಗಣ್ಣವರ, ಶ್ರೀಕಾಂತ ಹರಪನಹಳ್ಳಿ ಇತರರು ಇದ್ದರು.