

ಬೆಳಗಾವಿ: ಶಿಕ್ಷಕರು, ಸಾಹಿತಿಗಳ ಜ್ಞಾನ ಅಪಾರ. ಅವರು ತಮ್ಮಲ್ಲಿರುವ ಜ್ಞಾನ, ವಿಚಾರ ಹೊರಜಗತ್ತಿಗೆ ಉಣಬಡಿಸುತ್ತಾರೆ. ಹೀಗಾಗಿ ನಾವಿಂದು ಜ್ಞಾನವಂತರಾಗಿ ಬದುಕು ನಡೆಸಲು ಸಾಧ್ಯವಾಗಿದೆ ಎಂದು ಹಿರಿಯ ಲೇಖಕಿ ಶ್ವೇತಾ ನರಗುಂದ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಲೇಖಕಿಯರ ಸಂದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿರುವ ವಿಚಾರ, ಜ್ಞಾನ ಸಮಾಜಕ್ಕೆ ಉಣಬಡಿಸಬೇಕು. ಇದರಿಂದ ಮನುಷ್ಯನ ಜ್ಞಾನ ವಿಕಾಸ ಆಗುತ್ತದೆ ಎಂದರು. ಜಿಲ್ಲಾ ಲೇಖಕಿಯರ ಸಂದ ಪ್ರಧಾನ ಕಾರ್ಯದರ್ಶಿ ಆಶಾ ಯಮಕನಮರಡಿ ಮಾತನಾಡಿ, ಸಂದ ಸರ್ವತೋಮುಖ ಬೆಳವಣಿಗೆಗೆ ದತ್ತಿ ದಾನಿಗಳ ಸಹಾಯ, ಸಹಕಾರ ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿ ಸುಮಾ ಕಿತ್ತೂರ ಮಾತನಾಡಿದರು. ಸಂದ 30 ಸಾಧಕ ಸದಸ್ಯರಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.
ಶಶಿಕಲಾ ಹಾಗೂ ಲಿಂ.ಶಿವಪುತ್ರಪ್ಪ ಯಾದವಾಡ ಸ್ಮರಣಾರ್ಥ ನೀಡುವ ದತ್ತಿ ಪುಸ್ತಕ ಪ್ರಶಸ್ತಿಗೆ ಭಾಜನರಾದ ಗಂಗಾದೇವಿ ಚಕ್ರಸಾಲಿ ಅವರಿಗೆ ಪ್ರಶಸ್ತಿ ಪ್ರದಾನ, ಕಟ್ಟಿಮನಿ ಪ್ರತಿಷ್ಠಾನದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು. ಹಿರಿಯ ಲೇಖಕಿ ಪುಷ್ಪಾ ಮುರಗೋಡ, ಶ್ವೇತಾ ನರಗುಂದ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಕ್ಕೆ ದೇಣಿಗೆ ಕೊಟ್ಟರು. ದಾಾಯಣಿ ಕಾಪಸೆ 25 ಸಾವಿರ ರೂ. ದತ್ತಿ ನಿಧಿಗೆ ಕೊಟ್ಟರು.
ಸಂದ ಉಪಾಧ್ಯಕ್ಷ ವಾಸಂತಿ ಮೇಳೆರ, ತಾಲೂಕಾಧ್ಯಕ್ಷ ಸುರೇಶ ಹಂಜಿ, ಜಿಲ್ಲಾ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ, ಹಿರಿಯ ಲೇಖಕರಾದ ಸಾ.ರಾ. ಸುಳಕುಡೆ, ಅಶೋಕ ನರೋಡೆ, ಲೇಖಕಿ ಶಬಾನಾ ಅಣ್ಣಿಗೇರಿ, ಮೀನಾ ಸೂಡಿ, ಹಮೀದಾ ಬೇಗಂ, ದೇಸಾಯಿ, ಅನ್ನಪೂರ್ಣಾ ಹಿರೇಮಠ, ರೋಹಿಣಿ ಯಾದವಾಡ ಇತರರಿದ್ದರು.