

ಸರಗೂರು: ಉಳಿದೆಲ್ಲ ಸಮಾಜಗಳಿಗೆ ಮಾದರಿಯಾಗಿದ್ದ ಲಿಂಗಾಯತ ಸಮಾಜ ಇಂದು ಸಂಘರ್ಷಮಯ ವಾತಾವರಣಕ್ಕೆ ಸಿಲುಕುವಂತಾಗಿದೆ. ಆದಷ್ಟು ಬೇಗ ಅದರಿಂದ ಮೇಲೆದ್ದು ಜನ ಮೆಚ್ಚುವಂತಹ ಕೆಲಸ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಟರಾಜು ಕಾಟವಾಳು ಹೇಳಿದರು.
ಪಟ್ಟಣದ ಜೆಎಸ್‌ಎಸ್ ಶಿವರಾತ್ರೀಶ್ವರ ಶಿವಾನುಭವ ಮಂಗಳ ಮಂಟಪದಲ್ಲಿ ಸೋಮವಾರ ಮಹಾಸಭಾದ ನೂತನ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ಲಿಂಗಾಯತ ಸಮಾಜದಲ್ಲಿ ಜನ ಮೆಚ್ಚುವಂತೆ ನಡೆದುಕೊಂಡು ಬಂದ ಜನರು ಅನೇಕರಿದ್ದಾರೆ. ಆದರೆ ಇಂದು ಸಂಘರ್ಷಮಯ ವಾತಾವರಣದಲ್ಲಿ ಸಿಲುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಲಿಂಗಾಯತ ಸಮುದಾಯದಲ್ಲಿನ ಭಿನ್ನಾಭಿಪ್ರಾಯ ಹೆಚ್ಚಿಸಲು ಅನೇಕರು ಷಡ್ಯಂತ್ರ ನಡೆಸುತ್ತಿದ್ದಾರೆ. ಸಮಾಜದ ಜನರು ಯಾವುದೇ ಕಾರಣಕ್ಕೂ ಅದಕ್ಕೆ ಕಿವಿಗೊಡದೆ ಮುಂದೆ ಬರುವ ಪ್ರಯತ್ನ ಮಾಡಬೇಕು. ಇದಲ್ಲದೆ ಉಳಿದ ಸಮಾಜವನ್ನೂ ಗೌರವಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಡಿ.ಜಿ.ಶಿವರಾಜಪ್ಪ ಮಾತನಾಡಿ, ಸಮಾಜದ ಇಂತಹ ಕಾರ್ಯಕ್ರಮಗಳನ್ನು ಪ್ರತಿ ತಾಲೂಕು ಮಟ್ಟದಲ್ಲಿ ಆಚರಿಸಬೇಕು. ಧರ್ಮದ ಸಂಸ್ಕೃತಿ, ಸಂಸ್ಕಾರ ಇಂದಿನ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ತಿಳಿವಳಿಕೆ ನೀಡಬೇಕು ಎಂದರು.
ವೀರಶೈವ ಲಿಂಗಾಯತ ಸಹಕಾರ ಸಂಘದ ಅಧ್ಯಕ್ಷ ಗಣಪತಿ, ಡಿ.ಜಿ.ಶಿವರಾಜಪ್ಪ, ಜಯಕುಮಾರ್ ಶಿವಪುರ, ನಂದೀಶ್ ಮನುಗನಹಳ್ಳಿ, ಪರಶಿವ, ಚನ್ನಮಲ್ಲಪ್ಪ, ಗುರುಸ್ವಾಮಿ, ಮಲ್ಲೇಸ್ವಾಮಿ, ಶ್ಯಾಮ್, ತೇಜುಕುಮಾರ್, ಬಾಡಗ ಸಿದ್ದಪ್ಪ, ಸಮಾಜದ ಮುಖಂಡರು ಇದ್ದರು.
ವೀರಶೈವ ಲಿಂಗಾಯತ ಮಹಾಸಭಾ ನೂತನ ಅಧ್ಯಕ್ಷ ನಟರಾಜು ಕಾಟವಾಳು, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ವಿರೂಪಾಕ್ಷ ಮುಳ್ಳೂರು, ಎಚ್.ಸಿ.ಮಹದೇವಸ್ವಾಮಿ ಹಂಚೀಪುರ, ಎಸ್.ಎನ್.ಪ್ರಕಾಶ್ ಶಿವಪುರ, ಸಿ.ಕೆ.ಗಿರೀಶ ಚಾಮಲಾಪುರ, ಮಾದಪ್ಪ ಬಿ. ಬಾಡಗ, ಬಿ.ಶ್ರೀಕಂಠ ಬಿಡಗಲು, ಎಸ್.ಎನ್.ಮೋಹನ್‌ಕುಮಾರ್ ಸರಗೂರು, ಎಂ.ಮಂಜುನಾಥ್ ಕೊತ್ತೇಗಾಲ, ಎಸ್.ಆರ್. ಸುರೇಶ್ ಸಿದ್ದಾಪುರ, ಗುರುಸ್ವಾಮಿ ಮನುಗನಹಳ್ಳಿ, ಲಿಂಗರಾಜಪ್ಪ ಚನ್ನಗುಂಡಿ, ಎಂ.ಎನ್.ಬಸವರಾಜು ತೆಲಗುಮಸಹಳ್ಳಿ, ತೆರಣಿಮುಂಟಿ ವಿಕಾಸ್, ಪುಟ್ಟಮ್ಮ ಕಲ್ಲಂಬಾಳು, ಮಂಜುಳಾ ಎಂ.ಸಿ.ತಳಲು, ನೀಲಮ್ಮ ಕಂದೇಗಾಲ, ಮಂಜುಳಾ ಕಟ್ಟೆ ಹುಣಸೂರು,ಪುಟ್ಟಮಣ್ಣಿ ಹುಣ್ಣಸಹಳ್ಳಿ, ನಾಗರತ್ನಾ ಕುರ್ಣೇಗಾಲ, ಮಹದೇವಮ್ಮ ಶಾಂತಿಪುರ, ಡಿ.ಸಿ. ಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು.