ಸಂಘದ ಸಾಮಾಜಿಕ ಕಾರ್ಯ ವಿಶಿಷ್ಟವಾದದು

manuru friends
ಮಣೂರು ಫ್ರೆಂಡ್ಸ್ 24ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಂ.ಎನ್.ಮಧ್ಯಸ್ಥರಿಗೆ ಹುಟ್ಟೂರ ಸನ್ಮಾನ ನೀಡಲಾಯಿತು.
Published on

ಕೋಟ: ಸಂಘ-ಸಂಸ್ಥೆಗಳು ಹುಟ್ಟುವುದು ಸುಲಭ. ಆದರೆ ಅದನ್ನು ನಿರಂತವಾಗಿ ಕೊಂಡ್ಯೊಯುವ ಕಾರ್ಯ ಕ್ಲಿಷ್ಟಕರ ಈ ನಿಟ್ಟಿನಲ್ಲಿ ಮಣೂರು ಫ್ರೆಂಡ್ಸ್ ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನಿವೃತ್ತ ಉಪನ್ಯಾಸಕ ಎಂ.ಅರುಣಾಚಲ ಮಯ್ಯ ನುಡಿದರು.

ಶುಕ್ರವಾರ ಮಣೂರು ದೇಗುಲದ ವಾರ್ಷಿಕ ಜಾತ್ರೆ ಅಂಗವಾಗಿ ಮಣೂರು ಫ್ರೆಂಡ್ಸ್ 24ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಣೂರು ಫ್ರೆಂಡ್ಸ್ ಗೌರವ ಸಲಹೆಗಾರ ಎಂ.ಸುಬ್ರಾಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಮಣೂರು ಮಹಾಲಿಂಗೇಶ್ವರ ದೇಗುಲ ಅಧ್ಯಕ್ಷ ಸತೀಶ್ ಎಚ್.ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಂ.ಎನ್.ಮಧ್ಯಸ್ಥರಿಗೆ ಹುಟ್ಟೂರ ಸನ್ಮಾನ ನೀಡಲಾಯಿತು. ಕಾಯಕ ಯೋಗಿ ಕಾರ್ ಕೃಷ್ಣ ಪೂಜಾರಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು ಹಾಗೂ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಉದ್ಯಮಿ ಕೆ.ವೆಂಕಟೇಶ ಪ್ರಭು, ನಾಗೇಶ್ ಪೂಜಾರಿ ಬಾಳೆಬೆಟ್ಟು, ಮಣೂರು ಫ್ರೆಂಡ್ಸ್ ಗೌರವಾಧ್ಯಕ್ಷ ಸುರೇಶ್ ಆಚಾರ್, ಅಧ್ಯಕ್ಷ ರಾಘವೇಂದ್ರ ಆಚಾರ್ ಉಪಸ್ಥಿತರಿದ್ದರು. ಫ್ರೆಂಡ್ಸ್ ಮಾಜಿ ಅಧ್ಯಕ್ಷ ಸುಧಾಕರ್ ಆಚಾರ್ ಸ್ವಾಗತಿಸಿದರು. ಅಜಿತ್ ಆಚಾರ್ ನಿರೂಪಿಸಿ, ವಂದಿಸಿದರು. ರವೀಂದ್ರ ಕೋಟ, ದಿನೇಶ್ ಆಚಾರ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net