ಕ್ಲಬ್‌ಗಳ ಸಮಾಜ ಸೇವೆ ಅನನ್ಯ

27hos2p belur club
ಹೊಸನಗರದ ಸ್ಪೋರ್ಟ್ಸ್ ಅಸೋಸಿಯೇಷನ್ ಕ್ಲಬ್‌ನ ಮೇಲಂತಸ್ತಿನ ಕಟ್ಟಡವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಆರ್.ಎಂ.ಮಂಜುನಾಥ ಗೌಡ, ಅನಂತ ರಾವ್, ಪ್ರಭಾಕರ ರಾವ್, ಶ್ರೀಧರ್, ಕಲ್ಯಾಣಪ್ಪ ಗೌಡ ಇತರರಿದ್ದರು.
Published on

ಹೊಸನಗರ: ಪಟ್ಟಣದ ಸ್ಪೋರ್ಟ್ಸ್ ಅಸೋಸಿಯೇಷನ್ ಕೇವಲ ಆಟವಾಡುವ ಕ್ಲಬ್ ಆಗಿರದೆ ಸಮಾಜಮುಖಿ ಸಂಸ್ಥೆಯಾಗಿದೆ. ಇವರ ಸೇವೆಗಳು ಇತರ ಕ್ಲಬ್‌ಗಳಿಗೆ ಮಾದರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಸ್ಪೋರ್ಟ್ಸ್ ಅಸೋಸಿಯೇಷನ್ ಕ್ಲಬ್‌ನ ಮೇಲಂತಸ್ತಿನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕ್ಲಬ್ ಎಂದರೆ ಕೇವಲ ಆಟ-ಊಟಕ್ಕೆ ಸೀಮಿತವಾಗಿರದೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಸಂಸ್ಥೆಯು ವೃದ್ಧಾಶ್ರಮ ಮಾಡಲು ಕನಸು ಕಂಡಿದ್ದು, ನಿರ್ಮಾಣಕ್ಕೆ ಬೇಕಾದ ಅಗತ್ಯ ಭೂಮಿ ಮಂಜೂರು ಮಾಡಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕೆಲಸಕ್ಕೆಂದು ಹಳ್ಳಿಯಿಂದ ಪೇಟೆ ಸೇರಿದ ಮಕ್ಕಳು ಪುನಃ ಹಳ್ಳಿಗಳತ್ತ ಬರುವ ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಸಂಸ್ಥೆ ಅಧ್ಯಕ್ಷ ಗುಬ್ಬಿಗ ಅನಂತ ರಾವ್ ವಿವರಿಸಿದರು. ಕಾರ್ಯದರ್ಶಿ ಪ್ರಭಾಕರ್ ರಾವ್, ಶ್ರೀಧರ್, ಕಲ್ಯಾಣಪ್ಪ ಗೌಡ, ಎಂ.ಪಿ.ಸುರೇಶ್, ಬಿ.ಎಸ್.ಸುರೇಶ್, ನಾಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net