ಪತ್ರಕರ್ತರ ಸಾಮಾಜಿಕ ಹೊಣೆಗಾರಿಕೆ ದೊಡ್ಡದು

14 GJD
Published on

ಗಜೇಂದ್ರಗಡ: ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಹೊಣೆಗಾರಿಕೆಯೂ ದೊಡ್ಡದಿದೆ. ಹಿರಿಯ ಪತ್ರಕರ್ತರು ಕಿರಿಯರಿಗೆ ಮಾದರಿಯಾಗಿರಬೇಕು ಎಂದು ಸಾಹಿತಿ ಪ್ರೊ. ಬಿ.ಎ. ಕೆಂಚರಡ್ಡಿ ಹೇಳಿದರು.
ಪಟ್ಟಣದ ವಾಣಿಪೇಟೆಯ ಶ್ರೀ ಗವಿಸಿದ್ಧೇಶ್ವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಡಿಜಿಟಲ್ ಯುಗದಲ್ಲೂ ದಿನಪತ್ರಿಕೆ ಓದುವ ಮಜವೇ ಬೇರೆ. ಈ ಅನುಭವ ಆನ್‌ಲೈನ್ ಮಾಧ್ಯಮದಲ್ಲಿ ಸಿಗಲಾರದು. ಪತ್ರಿಕೋದ್ಯಮ, ಪತ್ರಿಕಾ ಸಾಹಿತ್ಯಕ್ಕೆ ಪತ್ರಿಕೆಗಳೇ ತಳಪಾಯವಾಗಿವೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಶ್ರೀಶೈಲ ಕುಂಬಾರ, ಕಸಾಪ ತಾಲೂಕಾಧ್ಯಕ್ಷ ಅಮರೇಶ ಪಿ.ಗಾಣಿಗೇರ, ಪತ್ರಕರ್ತರಾದ ರಾಘವೇಂದ್ರ ಕುಲಕರ್ಣಿ, ಡಿ.ಜಿ. ಮೋಮಿನ ಮಾತನಾಡಿದರು. ಡಾ. ಅರ್ಜುನ ಗೊಳಸಂಗಿ, ಎಸ್.ಐ. ಪತ್ತಾರ, ಬಸವರಾಜ ಕೊಟಗಿ, ಕಳಕೇಶ ವನ್ನಾಲ, ಶರಣಮ್ಮ ಅಂಗಡಿ, ಬಿ.ವಿ. ಮುನವಳ್ಳಿ, ಸಂಗಮೇಶ ಬಾಗೂರ, ಆರ್.ಎಸ್. ಕಟಗಿ, ಅಕ್ಕಮ್ಮ ನೀರಲಗಿ, ಆರ್.ಜಿ. ಮ್ಯಾಕಲ್, ಶೀತಲ್ ಓಲೇಕಾರ, ಆಕಾಶ ತಾಳಿಕೋಟಿ, ಬಿ.ಟಿ. ಹೊಸಮನಿ, ಎಸ್.ಎಸ್. ನರೇಗಲ್ಲ, ಎ.ಎಸ್. ಕವಡಿಮಟ್ಟಿ, ಲಲಿತಾ ಪವಾರ, ನಾಗರಾಜ ಬುಟ್ಟಾ, ರಾಜು ಅಂಗಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net