

ಯಲ್ಲಾಪುರ: ಪಟ್ಟಣದ ಪೊಲೀಸ್ ವಸತಿಗೃಹವೊಂದರಲ್ಲಿ ಸೆಯ್ಲಾನ್ ಕ್ಯಾಟ್ ಎಂಬ ಅರೆ ವಿಷಕಾರಿ ಹಾವು ಕಾಣಿಸಿಕೊಂಡು ಆತಂಕ ಮೂಡಿಸಿತು.
ಪೊಲೀಸ್ ವಸತಿಗೃಹದಲ್ಲಿ ಕಾನ್ಸ್ಟೆಬಲ್ ದೀಪಕ ನಾಯ್ಕ ಎಂಬುವವರ ಮನೆಯಲ್ಲಿ ದೇವರ ಫೊಟೊದ ಮೇಲೆ ಹಾವು ಮಲಗಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಅಕ್ಬರ ಅಲಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು.
ಸೆಯ್ಲಾನ್ ಕ್ಯಾಟ್ ಹೆಚ್ಚಾಗಿ ಮರ-ಗಿಡಗಳ ಮೇಲೆ ವಾಸಿಸುವ ಹಾವಾಗಿದ್ದು, ಅರೆ ವಿಷಕಾರಿ ಜಾತಿಗೆ ಸೇರಿದೆ.