‘ದಿ ಸ್ಮೋಕ್ ಶಾಫ್’ ಮೇಲೆ ಸಿಸಿಐಬಿ ದಾಳಿ

15RAVIG12-Web
ದಿ ಸ್ಮೋಕ್ ಶಾಫ್ ಮೇಲೆ ದಾಳಿ ನಡೆಸಿರುವ ಸಿಸಿಐಬಿ ಪೊಲೀಸರು ಮೂವರನ್ನು ಬಂಧಿಸಿದ್ದು, ಮಾದಕ ಪದಾರ್ಥ ಮಿಶ್ರಿತ 193 ಪ್ಯಾಕೆಟ್ ವಶಪಡಿಸಿಕೊಂಡಿದ್ದಾರೆ. ಡಿಸಿಪಿ ವಿಕ್ರಂ ಅಮಟೆ, ಪಿಐ ಸಂಜೀವ ಕಾಂಬಳೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದಾರೆ.
Published on

ಬೆಳಗಾವಿ: ಮಾದಕ ವಸ್ತು ಮಿಶ್ರಿತ ಪದಾರ್ಥ ಮಾರುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿರುವ ಸಿಸಿಐಬಿ ಪೊಲೀಸರು, ಗುರುವಾರ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಹುಕ್ಕಾದಲ್ಲಿ ಸೇದುವ 8.685 ಕೆ.ಜಿ. ತೂಕದ 193 ಪ್ಯಾಕೆಟ್ ಹಾಗೂ 1,400 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮೂಲತಃ ಕೇರಳದ ಕಾಸರಗೋಡಿನ ಹಾಗೂ ಹಾಲಿ ಇಲ್ಲಿನ ಸುಭಾಷ ನಗರದಲ್ಲಿ ವಾಸವಾಗಿದ್ದ ಸಲೀಂ ಮುಂಡರಪಾಳಿ ಅಬ್ದುಲ್ಲಾ, ಮಹ್ಮದ್‌ಅಲಿ ಇಬ್ರಾಹಿಂ, ಅಬುಬಕರ್ ಮುಮ್ಮಿದ ಮಹ್ಮದ್ ಅಡ್ಡತೋಟೆ ಬಂಧಿತರು. ಹಲವು ವರ್ಷಗಳಿಂದ ನಗರದ ಕೊಲ್ಲಾಪುರ ವೃತ್ತದಲ್ಲಿ ‘ದಿ ಸ್ಮೋಕ್ ಶಾಫ್’ ಹೆಸರಿನ ಅಂಗಡಿ ಇಟ್ಟುಕೊಂಡು ವಿವಿಧ ಕಂಪನಿಗಳ ಸಿಗರೇಟ್ ಮತ್ತು ಹುಕ್ಕಾ ಮಾರಾಟ ಮಾಡುತ್ತಿದ್ದರು.

ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಮಾರ್ಗದರ್ಶನದಂತೆ ಸಿಸಿಐಬಿ ಪಿಐ ಸಂಜೀವ ಕಾಂಬಳೆ ನೇತೃತ್ವದ ತಂಡ ಅಂಗಡಿ ಮೇಲೆ ಗುರವಾರ ದಾಳಿ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net