ನ್ಯಾಯ ಸಿಗುವವರೆಗೂ ಧರಣಿ ಮುಂದುವರಿಕೆ

15_web
Published on

ಬೇಡಿಕೆ ಈಡೇರಿಸಲು ಆಗ್ರಹಿಸಿ ಮುಳಬಾಗಿಲು ತಾಲೂಕು ಆಡಳಿತ ಕಚೇರಿ ಎದುರು ಹೋರಾಟ


ಮುಳಬಾಗಿಲು: ಜನ ವಿರೋಧಿ ತಾಲೂಕು ಆಡಳಿತದಿಂದ ಬಡವರು, ಶೋಷಿತರು, ರೈತರು ತೊಂದರೆಗೆ ಒಳಗಾಗುತ್ತಿದ್ದು, ಇವರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಬೇಕು ಎಂದು ಸಂಘಟನೆಯ ಮಾಜಿ ಅಧ್ಯೆ ಗೀತಾ ಕರೆ ನೀಡಿದರು.
ತಾಲೂಕ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ (ಸಂಯೋಜಕ)ಯಿಂದ ಸೋಮವಾರ ಹಮ್ಮಿಕೊಂಡಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಪ್ರತಿಭಟನೆ ಮಾಡುವಾಗ ರಾಜಕೀಯವಾಗಿ ಒತ್ತಡ ತರುವ ಸಂಭವಗಳು ಹೆಚ್ಚಿರುತ್ತವೆ. ಯಾವ ಒತ್ತಡಕ್ಕೂ ಮಣಿಯದೆ ಬೇಡಿಕೆ ಈಡೇರುವವರಿಗೂ ಪ್ರತಿಭಟನೆ ಮುನ್ನಡೆಸಬೇಕು ಎಂದರು.
ಜಿಲ್ಲಾ ಸಂಘಟನಾ ಸಯೋಜಕ ಮೆಕಾನಿಕ್​ ಜಿ. ಶ್ರೀನಿವಾಸ್​ ಮಾತನಾಡಿ, 20 ಬೇಡಿಕೆಗಳನ್ನು ಈಡೇರಿಸಲು ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನಕ್ಕೆ ಬಂದಿಲ್ಲ. ಸ್ಥಳಕ್ಕೆ ಕಂದಾಯ ಸಚಿವರು ಬಂದು ನಮ್ಮ ಬೇಡಿಕೆ ಈಡೇರಿಸಿದರೆ ಮಾತ್ರ ಧರಣಿ ವಾಪಸ್​ ಪಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿಯಲ್ಲಿ ಬಿಡು ಬಿಟ್ಟಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು, ಭೂ ರಹಿತರು ದರಖಾಸ್ತು ಮೂಲಕ ಸಾಗುವಳಿ ಚೀಟಿ ಪಡೆದಿರುವ ರೈತರಿಗೆ ಖಾತೆ ಮಾಡಿಕೊಡಬೇಕು. ರಾಜ ಕಾಲುವೆಗಳ ಒತ್ತುವರಿ ತೆರುವುಗೊಳಿಸಬೇಕು. ತಾಲೂಕಿನ ಖರಾಬ್​ ಜಮೀನುಗಳು ಬೆಂಗಳೂರಿನ ಭೂ ಮಾಲೀಕರ ಪಾಲಾಗುತ್ತಿರುವುದನ್ನು ತಡೆಗಟ್ಟಿ. ತಾಲೂಕಿನ ಭೂರಹಿತ ಶೋಷಿತ ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಜನಾಂಗವನ್ನು ಗುರುತಿಸಿ ಅವರಿಗೆ ನೀಡಬೇಕು ಎಂದರು.
ಜಿಲ್ಲಾ ಸಂಘಟನಾ ಸಂಯೋಜಕ ಕೀಲುಹೊಳಲಿ ಸತೀಶ್​, ಜಿಲ್ಲಾ ಮುಖಂಡ ಗಣೇಶಪಾಳ್ಯ ಕಿಟ್ಟ, ತಾಲೂಕು ಸಂಘಟನಾ ಸಮಿತಿ ಸಂಯೋಜಕ ಗುಜ್ಜ ಮಾರಂಡಹಳ್ಳಿ ಜಗದೀಶ್​, ಕಪ್ಪಲಮಡುಗು ಅಶೋಕ್​, ನಗರ ಸಂಯೋಜಕ ಬಂಡಹಳ್ಳಿ ಶ್ರೀರಾಮ್​, ರೈತಮಿತ್ರ ಸಮಾಜಕರಾದ ಬಾಲಕೃಷ್ಣ, ಉಪಾಧ್ಯಕ್ಷ ಜೆ.ವಿ.ವೆಂಕಟೇಶ್​, ಸದಸ್ಯರಾದ ಆರ್​.ಸುರೇಶ್​, ರಂಗಣ್ಣ, ಹರೀಶ್​, ಅಖಿಲ್​ ಸೇವಾ ಟ್ರಸ್ಟ್​ ಅಧ್ಯಕ್ಷ ಸುರೇಶ್​, ಈರಪ್ಪ, ರಾಜಪ್ಪ, ನಾರಾಯಣಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net