

ಮುದ್ದೇಬಿಹಾಳ: ನಾಗಬೇನಾಳ ಗ್ರಾಪಂಗೆ ಹಲವು ವರ್ಷಗಳಿಂದ ತೆರಿಗೆ ತುಂಬದ ಬಸವಸಾಗರ ಜಲಾಶಯದ ಬಳಿ ವಿದ್ಯುತ್ ಉತ್ಪಾದಿಸುತ್ತಿರುವ ಮುರ್ಡೇಶ್ವರ ಪವರ್ ಕಾಪೋರ್ರೇಷನ್ ಕಂಪನಿ ವಿರುದ್ಧ ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಯುವಜನ ಸೇನೆ ನೇತೃತ್ವದಲ್ಲಿ ವಿವಿಧ ಸಂಟನೆಗಳು ಇಲ್ಲಿನ ತಾಪಂ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಬುಧವಾರ ಎರಡು ದಿನ ಪೂರೈಸಿತು.
24 ವರ್ಷಗಳಲ್ಲಿ 2&3 ಕೋಟಿ ರೂ. ತೆರಿಗೆ ವಂಚಿಸಿದ ಸಂಶಯವಿದೆ. 75 ಲ ರೂ. ತೆರಿಗೆ ಬಾಕಿ ಇದೆ ಎಂದು ಪಂಚಾಯಿತಿಯವರು ಹೇಳುತ್ತಾರೆ. ಈ ಬಗ್ಗೆ ತನಿಖೆ ನಡೆಸಲು ತಹಸೀಲ್ದಾರ್, ಜಿಪಂ ಸಿಇಒ ಅಥವಾ ಜಿಲ್ಲಾಧಿಕಾರಿ ನೇತೃತ್ವದ ತನಿಖಾ ತಂಡ ರಚಿಸುವಂತೆ ಕೋರಿದ್ದರೂ ಸ್ಥಳಿಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹೋರಾಟದ ನೇತೃತ್ವ ವಹಿಸಿದ್ದ ಸೇನೆ ಅಧ್ಯ ಶಿವಾನಂದ ವಾಲಿ ತಿಳಿಸಿದರು.
ಬುಧವಾರ ಧರಣಿ ಸ್ಥಳಕ್ಕೆ ತಾಪಂ ಯೋಜನಾಧಿಕಾರಿ ಖೂಬಾಸಿಂಗ್ ಜಾಧವ ಭೇಟಿ ನೀಡಿ ತನಿಖೆಗೆ ಸ್ಥಳಿಯ ಮಟ್ಟದ ಐವರ ತಂಡ ರಚಿಸಿರುವ ಪತ್ರ ಕೊಟ್ಟು ಧರಣಿ ಕೈಬಿಡುವಂತೆ ಮನವೊಲಿಸಲು ಮುಂದಾಗಿದ್ದರು.
ಆದರೆ, ಸ್ಥಳಿಯ ಮಟ್ಟದ ತಂಡದಿಂದ ಸರಿಯಾದ ತನಿಖೆ ನಡೆಯುವುದಿಲ್ಲ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲೇ ತಂಡ ರಚಿಸಿ ಲಿಖಿತ ರೂಪದಲ್ಲಿ ಕೊಟ್ಟರೆ ಧರಣಿ ಕೈಬಿಡುವುದಾಗಿ ತಿಳಿಸಿದರು.
ಶಿವಾನಂದ ವಾಲಿ, ಹುಲಗಪ್ಪ ಮಾದರ ನಾಗರಬೆಟ್ಟ, ಶೇಖಸಾ ನದಾಫ್, ಮಲ್ಲು ತಳವಾರ ಬಿಜ್ಜೂರ, ರಫೀಕ್ ತೆಗ್ಗಿನಮನಿ, ಬಾಬು ತೆಗ್ಗಿನಮನಿ, ಗಂಗು ಗಂಗನಗೌಡ್ರ, ಲಕ್ಷ$್ಮ್ಮಣ ತಾಳಿಕೋಟಿ, ಆನಂದ ಬಟಗಿ, ಗುರಪ್ಪ ಬಟಗಿ, ಶಿವು ವನಕಿಹಾಳ, ತಂಗಡಗಿ ಗ್ರಾಪಂ ಮಾಜಿ ಅಧ್ಯ ಸಂಗಯ್ಯ ಸಾರಂಗಮಠ, ಸಂಗಪ್ಪ ಪೊಲೀಸ್ಪಾಟೀಲ, ಚಂದ್ರಾಮಪ್ಪ ಹಡಪದ ಇತರರಿದ್ದರು.