ಸಿದ್ಧಗಂಗಾ ಶ್ರೀಗಳ ಸರಳ ಜೀವನ ದಾರಿ ದೀಪ

ಕೊಳ್ಳೇಗಾಲದ ಜನನಿ ಆಸ್ಪತ್ರೆ ಸಮೀಪ ದಾಸೋಹ ದಿನ ಆಚರಿಸಲಾಯಿತು. ಬೂದಿತಿಟ್ಟು ಗುರುಸ್ವಾಮಿ, ಮಹದೇವ ಸ್ವಾಮಿ, ಲಯನ್ಸ್ ಲೋಕೇಶ್, ಜೆಸಿಬಿ ಲೋಕೇಶ್, ಕಿನಕಹಳ್ಳಿ ಲೋಕೇಶ್, ಪುಟ್ಟಣ್ಣ, ತಿಮ್ಮರಾಜೀಪುರ ರಾಜು, ಯುಪಿಎಸ್ ಮಹದೇಸ್ವಾಮಿ ಇದ್ದರು.
ಕೊಳ್ಳೇಗಾಲದ ಜನನಿ ಆಸ್ಪತ್ರೆ ಸಮೀಪ ದಾಸೋಹ ದಿನ ಆಚರಿಸಲಾಯಿತು. ಬೂದಿತಿಟ್ಟು ಗುರುಸ್ವಾಮಿ, ಮಹದೇವ ಸ್ವಾಮಿ, ಲಯನ್ಸ್ ಲೋಕೇಶ್, ಜೆಸಿಬಿ ಲೋಕೇಶ್, ಕಿನಕಹಳ್ಳಿ ಲೋಕೇಶ್, ಪುಟ್ಟಣ್ಣ, ತಿಮ್ಮರಾಜೀಪುರ ರಾಜು, ಯುಪಿಎಸ್ ಮಹದೇಸ್ವಾಮಿ ಇದ್ದರು.
Published on

 ಕೊಳ್ಳೇಗಾಲ: ಮೋದಿ ಟೀ ಸ್ಟಾಲ್ ವತಿಯಿಂದ ಪಟ್ಟಣದ ಜನನಿ ಆಸ್ಪತ್ರೆ ಸಮೀಪ ಮಂಗಳವಾರ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಾಸೋಹ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಶ್ರೀಗಳ ಭಾವಚಿತ್ರಕ್ಕೆ ಕೊಳ್ಳೇಗಾಲ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಬಸವರಾಜು ಮಾತನಾಡಿ, ಮೋದಿ ಟೀ ಸ್ಟಾಲ್ ಸ್ನೇಹಿತರ ಬಳಗ 6 ವರ್ಷಗಳಿಂದ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುತ್ತಿದೆ. 15 ವರ್ಷಗಳಿಂದ ಶ್ರೀಗಳ ಜಯಂತ್ಯುತ್ಸವವನ್ನು ಆಯೋಜಿಸಲಾಗುತ್ತಿದೆ. ಶ್ರೀಗಳ ಸರಳ ಹಾಗೂ ಆದರ್ಶ ಜೀವನವೇ ನಮಗೆ ದಾರಿ ದೀಪ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ ಮಾತನಾಡಿ, ನಡೆದಾಡುವ ದೇವರಾಗಿ ಪ್ರಸಿದ್ಧಿ ಪಡೆದ ಶ್ರೀಗಳು ದಾಸೋಹ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದರು. ಜಾತಿ ತಾರತಮ್ಯವಿಲ್ಲದೆ ಸಿದ್ಧಗಂಗಾ ಮಠದಲ್ಲಿ ಅಕ್ಷರ ದಾಸೋಹ ನಡೆಸಿದರು. ಪರಿಣಾಮ ಅವರ ಪುಣ್ಯಸ್ಮರಣೆ ದಿನವನ್ನು ಎಲ್ಲ ಜಾತಿಯ ಜನರು ಆಚರಿಸುತ್ತಿದ್ದಾರೆ ಎಂದರು.

ಮುಖಂಡ ನಟರಾಜು ಮಾಳಿಗೆ ಮಾತನಾಡಿ, ಶ್ರೀಗಳ ಮಾದರಿ ಜೀವನ ಅವರನ್ನು ಭಾರತದ ರತ್ನವನ್ನಾಗಿಸಿದೆ. ಶ್ರೀಗಳು ಎಲ್ಲರ ಮನಸ್ಸಲ್ಲೂ ರತ್ನವಾಗಿ ಉಳಿದಿದ್ದಾರೆ ಎಂದರು.

ಭಜನೆ ಕಾರ್ಯಕ್ರಮ: ಶ್ರೀಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಶ್ರೀ ಮಹದೇಶ್ವರ ಐಟಿಐ ಕಾಲೇಜು ಪ್ರಾಂಶುಪಾಲ ಮಹೇಶ್ ಮತ್ತು ತಂಡದ ಸಿದ್ದು ಸಿಂಗರ್, ಮಹದೇಸ್ವಾಮಿ, ಪ್ರಸಾದ್ ಮಂಡ್ಯ, ತಬಲ ಕುಮಾರ್ ಭಕ್ತಿ ಗೀತೆಗಳು, ಶಿವಕುಮಾರ ಸ್ವಾಮಿಗಳ ಆರಾಧನೆ ಗೀತೆ ಮತ್ತು ಭಜನೆ ಪ್ರಸ್ತುತ ಪಡಿಸಿದರು.

ಮೋದಿ ಟೀ ಸ್ಟಾಲ್ ಸ್ನೇಹ ಬಳಗದ ಬೂದಿತಿಟ್ಟು ಗುರುಸ್ವಾಮಿ, ಮಾಲೀಕ ಮಹದೇವ ಸ್ವಾಮಿ, ಲಯನ್ಸ್ ಲೋಕೇಶ್, ಜೆಸಿಬಿ ಲೋಕೇಶ್, ಕಿನಕಹಳ್ಳಿ ಲೋಕೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಉಪಾಧ್ಯಕ್ಷ ತಿಮ್ಮರಾಜೀಪುರ ರಾಜು ನಗರಸಭೆ ಸದಸ್ಯ ಪ್ರಕಾಶ್, ಜಿ.ಪಿ.ಶಿವಕುಮಾರ್, ರಾಮಕೃಷ್ಣ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಿಂದು ಲೋಕೇಶ್, ಮುಖಂಡರಾದ ಅಚ್ಗಾಳ್ ನಾಗರಾಜಪ್ಪ, ಮಲ್ಲೇಶಪ್ಪ, ಯುಪಿಎಸ್ ಮಹದೇಸ್ವಾಮಿ, ಕಮಲ್ ನಾಗರಾಜು, ವಿಜಯವಾಣಿ ಪತ್ರಿಕಾ ವಿತರಕ ಮಲ್ಲೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net