

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಗಳೊಂದಿಗೆ ಗುರುವಾರ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ಶಿವರಾಯ ಮುತ್ಯಾನ ಗದ್ದುಗೆಗೆ ಮಹಾಭಿಷೇಕ, ವಿಶೇಷ ಪೂಜೆ, ಬಳಿಕ ಶಿವರಾಯ ಮುತ್ಯಾನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಗ್ರಾಮದ ಎಲ್ಲ ಬಡಾವಣೆಯಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯುದ್ದಕ್ಕೂ ಭಕ್ತರು ಭಂಡಾರ ಎರಚಿ ಸಂಭ್ರಮಿಸಿದರು. ವಿವಿಧ ಕಲಾ ಮೇಳಗಳ ಪ್ರದರ್ಶನ, ಮಧ್ಯಾಹ್ನ ಪ್ರಸಾದ ಸೇವೆ ನೆರವೇರಿತು.
ಅರ್ಚಕ ಸೋಮನಿಂಗ ಪೂಜಾರಿ, ಮುಖಂಡರಾದ ಗುಂಡು ಕುರಬರ, ಶಿವರಾಯ ಹಿರೇಕುರಬರ, ಮುತ್ತಪ್ಪ ಸನದಿ, ಚಿದಾನಂದ ಮುಕಣಿ, ರಾಯಪ್ಪ ಬಾಗಿ, ಸಿದ್ದಪ್ಪ ಲೋಕುರ, ಅಣ್ಣಪ್ಪ ಬಾಗಿ, ಸುರೇಶ ಬಾಗಿ, ರಾಮಪ್ಪ ಸನದಿ, ಚಂದ್ರಕಾಂತ ಬಾಗಿ, ದೀಪಕ ಮುರುಗುಂಡಿ ಇತರರಿದ್ದರು.