ಪೌರಕಾರ್ಮಿಕರ ಸೇವೆ ಶ್ಲಾಘನೀಯ

30ckd2
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 40;
Published on

ಚಿಕ್ಕೋಡಿ: ಮಹಾತ್ಮ ಗಾಂಧೀಜಿ ಆಶಯದಂತೆ ಸ್ವಚ್ಛತಾ ಹೀ ಸೇವಾ ಯೋಜನೆಯಡಿ ಚಿಕ್ಕೋಡಿ ಪಟ್ಟಣ ಸ್ವಚ್ಛ, ಸುಂದರ ಮತ್ತು ಆರೋಗ್ಯ ಭಾರತದ ಕನಸು ನನಸು ಮಾಡುವ ನಿಟ್ಟಿನಲ್ಲಿ ಪುರಸಭೆ ಸದಾ ಪ್ರಯತ್ನಿಸುತ್ತಿದೆ ಎಂದು ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ ಹೇಳಿದರು.

ಇಲ್ಲಿನ ಪುರಸಭೆ ಆವರಣದಲ್ಲಿ ಸ್ವಚ್ಛ ಭಾರತ ಮಿಷನ್, ಪೌರಾಡಳಿತ ಇಲಾಖೆ ಹಾಗೂ ಪುರಸಭೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದ ಸ್ವಚ್ಛತೆೆ ಹಾಗೂ ಅಂದವಾಗಿಡುವಲ್ಲಿ ಪೌರಕಾರ್ಮಿಕರ ಶ್ರಮ ಶ್ಲಾಘನೀಯ. ಒಂದು ದಿನ ಒಂದು ಗಂಟೆ ಒಟ್ಟಿಗೆ ಶ್ರಮದಾನ ಹಾಗೂ ಇನ್ನಿತರ ಕ್ರಿಯಾಶೀಲ ಕಾರ್ಯಕ್ರಮ ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.

ಪುರಸಭೆ ಉಪಾಧ್ಯಕ್ಷ ಇರ್ಫಾನ್ ಪಟೇಲ್, ಸದಸ್ಯರಾದ ಸಂಜಯ ಕವಟಗಿಮಠ, ಬಾಬು ಮಿರ್ಜೆ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ, ಬಿ.ಪಿ.ಕರನಿಂಗ, ದುಂಡಪ್ಪ ರಂಗನ್ನವರ, ಅಶ್ವಿನಿ ಕಾಳೆ, ಪ್ರಕಾಶ ಹೊನಮಾನೆ, ಕಿರಣ ಬಳ್ಳುರ್ಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net