ರಾಷ್ಟ್ರ ರಕ್ಷಣೆಗೆ ಸೈನಿಕರ ಸೇವೆ ಅನನ್ಯ

VV DIGITAL
Published on

ಲಕ್ಷ್ಮೇಶ್ವರ ದೇಶದ ಜನರು ನೆಮ್ಮದಿಯಿಂದ ಬದುಕಲು ಸೈನಿಕರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹಗಲು-ರಾತ್ರಿ ಗಡಿ ಕಾಯುತ್ತಿದ್ದಾರೆ. ಸೈನಿಕರಿಗೆ ಎಲ್ಲರೂ ಋಣಿಯಾಗಿರಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಭಾರತೀಯ ಸೇನೆಯಲ್ಲಿ 23 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಭಾನುವಾರ ಪಟ್ಟಣಕ್ಕೆ ಆಗಮಿಸಿದ ಹವಾಲ್ದಾರ ಶರಣಪ್ಪ ರುದ್ರಪ್ಪ ಬೂದಿಹಾಳ ಅವರ ಸ್ವಾಗತ ಹಾಗೂ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರ ರಕ್ಷಣೆಗಾಗಿ ಸೈನಿಕರು ತಮ್ಮ ಜೀವನ ಮೀಸಲಾಗಿಟ್ಟಿದ್ದಾರೆ. ಅವರ ತ್ಯಾಗ, ಸೇವೆ ಅನನ್ಯವಾದುದು. ಎಂದರು.

ಗೌರವ ಸ್ವೀಕರಿಸಿದ ಶರಣಪ್ಪ ಬೂದಿಹಾಳ ಮಾತನಾಡಿ, ಸೇವಾ ನಿವೃತ್ತಿ ಹೊಂದಿದರೂ ದೇಶ ಸೇವೆಯಿಂದ ನಿವೃತ್ತಿಯಾಗಿಲ್ಲ. ದೇಶ ರಕ್ಷಣೆಗೆ ಯಾವಾಗ ಕರೆದರೂ ಹೋಗಲು ಸಿದ್ಧ. ದೇಶ ಸೇವೆ ದೇವರ ಸೇವೆಗೆ ಸಮ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ದೇಶ ಸೇವೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಪಟ್ಟಣದ ಪಂಪ ವೃತ್ತದಿಂದ ತೆರೆದ ವಾಹನದಲ್ಲಿ ಶರಣಪ್ಪ ಬೂದಿಹಾಳ ದಂಪತಿಯನ್ನು ಮೆರವಣಿಗೆ ಮಾಡಲಾಯಿತು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿ.ಎಸ್. ಹಿರೇಮಠ, ಮಹಾಂತೇಶ ಸುಣಗಾರ, ಎಸ್.ಎಫ್. ಹಳ್ಳ್ಯಾಳ, ರಮೇಶ ಹುಲಸೋಗಿ, ಹನುಮಂತಗೌಡ ಶೀಲವಂತರ, ಬಿ.ಎಸ್. ಹಿರೇಮಠ, ಈರಪ್ಪ ಸಂಕ್ಲಿಪುರ, ರಮೇಶ ಹರಕೇರಿ, ಶೇಖರಪ್ಪ ತಹಸೀಲ್ದಾರ, ಟಿ.ಆಯ್ ಪೂಜಾರ, ಸುರೇಶ ಹುಲಿಕಟ್ಟಿ, ಹನಮಂತಗೌಡ ಪಾಟೀಲ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net