

ಮೈಸೂರು: ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಜತೆಗೆ ಶುಶ್ರೂಷಕರ ಸೇವೆ ಮಹತ್ವದ್ದಾಗಿದೆ. ಯಾವುದೇ ತಾರತಮ್ಯ ಮಾಡದೆ ರೋಗಿಗಳ ಆರೈಕೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ತೋರುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಹೇಳಿದರು.
ಜನತಾನಗರದ ಮೌರ್ಯ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನ ಕಾರ್ಯಕ್ರಮದಲ್ಲಿ ದಾದಿಯರನ್ನು ಸನ್ಮಾನಿಸಿ ಮಾತನಾಡಿದರು.
ಕೋವಿಡ್ ವೇಳೆ ನಮ್ಮವರನ್ನು ನಾವೇ ಮುಟ್ಟಲಿಲ್ಲ, ಮಾತನಾಡಿಸಲಿಲ್ಲ. ಆದರೆ, ಆಸ್ಪತ್ರೆಗಳಲ್ಲಿ ಯಾವ ಸಂಬಂಧ ಇಲ್ಲದ ದಾದಿಯರು ತಮ್ಮ ಜೀವದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. ದೇಶಕ್ಕೆ ವೈದ್ಯರು ಮತ್ತು ದಾದಿಯರು ಬೆನ್ನೆಲುಬಾಗಿದ್ದಾರೆ ಎಂದರು.
ಮುಖಂಡರಾದ ವರುಣ ಮಹದೇವ್, ಚೇತನ್ ಗೌಡ, ವೆಂಕಟೇಶ್, ಬೈರತಿ ಲಿಂಗರಾಜು, ಲೋಕೇಶ್, ಶಿವು ಕಡಕೋಳ, ದುರ್ಗಾ ಪ್ರಸಾದ್, ರವಿಚಂದ್ರ, ಮೋಹನ್ ಕುಮಾರ್, ನವೀನ್ ಕೆಂಪಿ ಇತರರಿದ್ದರು.