ವೈದ್ಯರು, ಲೆಕ್ಕಪರಿಶೋಧಕರ ಸೇವೆ ಸ್ಮರಣೀಯ

h3-rotary
Published on

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ವೈದ್ಯರ ಮತ್ತು ಚಾರ್ಟರ್ಡ್ ಅಕೌಂಟೆಂಟ್ ದಿನವನ್ನು ಸಂಭ್ರಮದಿಂದ ಇಲ್ಲಿಯ ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನಾ ಕ್ಲಬ್‌ನಲ್ಲಿ ಗುರುವಾರ ಆಚರಿಸಲಾಯಿತು.

ಅಧ್ಯಕ್ಷ ಕಿರಣ ಹೆಬಸೂರ ಉದ್ಘಾಟಿಸಿ ಮಾತನಾಡಿ, ವೈದ್ಯರು ತಮ್ಮ ಜೀವ ಪಣಕ್ಕಿಟ್ಟು ಹಗಲಿರಳು ಸಮಾಜ ಸೇವೆ ಮಾಡುತ್ತಿದ್ದಾರೆ. ಲೆಕ್ಕಪರಿಶೋಧಕರ ಆರ್ಥಿಕ ಶಿಸ್ತಿನಿಂದ ದೇಶವು ಆರ್ಥಿಕವಾಗಿ ಬಲಾಢ್ಯವಾಗುತ್ತಿದೆ ಎಂದು ಗುಣಗಾನ ಮಾಡಿದರು.

ರೋಟರಿ ಕ್ಲಬ್‌ನ ಹಿರಿಯ ಸದಸ್ಯರಾದ ರಾಜಾ ದೇಸಾಯಿ, ಶಿವರಾಮ ಹೆಗಡೆ ಮಾತನಾಡಿದರು.

ವೈದ್ಯಕೀಯ ಮತ್ತು ಹಣಕಾಸು ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಹಿರಿಯ ಸದಸ್ಯರಾದ ಸಿಎ ಡಾ.ಎನ್.ಎ. ಚರಂತಿಮಠ, ಡಾ.ಎಸ್.ಎಸ್. ಹಿರೇಮಠ, ಕಾರ್ಯದರ್ಶಿ ರಿಶಿ ತಿವಾರಿ, ಡಾ.ಪಿ.ವಿ. ದತ್ತಿ, ಬಾಪು ಬಿರಾದಾರ, ಸುರೇಂದ್ರ ಪೋರ‌್ವಾಲ, ಎಂ.ಕೆ. ಪಾಟೀಲ, ಅರವಿಂದ ಕುಬಸದ, ಅಮರ ಸೂಜಿ, ಡಾ. ನಾರಾಯಣ ಹೆಬಸೂರ, ಪ್ರಕಾಶರಾವ್, ಬಿ.ಬಿ. ಪಾಟೀಲ, ಎ.ವಿ. ಸಂಕನೂರ, ಮಂಜುನಾಥ ಹೊಂಬಳ ಇತರರು ಇದ್ದರು.

ಕಾರ್ಯದರ್ಶಿ ರಿಶಿ ತಿವಾರಿ ವಂದಿಸಿದರು. ಕ್ಲಬ್‌ನ ಸದಸ್ಯರು ಡಾ, ಪಿ.ವಿ ದತ್ತಿ, ಬಾಪು ಬಿರಾದರ, ಸುರೇಂದ್ರ ಪೋರ‌್ವಾಲ ಎಮ್.ಕೆ.ಪಾಟೀಲ, ಅರವಿಂದ ಕುಬಸದ್, ಅಮರ ಸೂಜಿ, ಡಾ. ನಾರಾಯಣ ಹೆಬಸೂರ ಪ್ರಕಾಶ್ ರಾವ್, ಬಿ.ಬಿ. ಪಾಟೀಲ, ಎ.ವಿ. ಸಂಕನೂರು ಮತ್ತು ಮಂಜುನಾಥ ಹೊಂಬಳ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಾಂಸ್ಕೃತಿಕ ಮಿಲನ ಮತ್ತು ಸ್ನೇಹಪೂರ್ಣ ಸಹಭೋಜನ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net