ಪೌರಕಾರ್ಮಿಕರ ಸೇವೆ ಶ್ಲಾಘನೀಯ

23MNL1
Published on

ಮುನವಳ್ಳಿ: ಮಳೆ, ಬಿಸಿಲು ಮತ್ತು ಚಳಿಯೆನ್ನದೆ ದಿನನಿತ್ಯ ನಸುಕಿನ ಜಾವ ಸ್ವಚ್ಛತಾ ಕಾರ್ಯ ಕೆಗೊಳ್ಳುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಪುರಸಭೆ ಅಧ್ಯಕ್ಪ ಸಿ.ಬಿ.ಬಾಳಿ ಹೇಳಿದರು.

ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು. ಪೌರಕಾರ್ಮಿಕರು ದುಶ್ಚಟ ತೊರೆದು ಮಕ್ಕಳಿಗೆ ಉತ್ತಮ ಶಿಣ ನೀಡಿ ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದು ಕರೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ ಮಾತನಾಡಿ, ಪೌರಕಾರ್ಮಿಕರನ್ನು ಸಮಾಜ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು

ರಾಜ್ಯ ಪೌರ ಸೇವಾ ನೌಕರರ ಮುನವಳ್ಳಿ ಶಾಖೆ ಅಧ್ಯ ಅನಿಲ ಗಿಡ್ನಂದಿ ಮಾತನಾಡಿ, ಪೌರಕಾರ್ಮಿಕರು ಸ್ವಚ್ಛತೆಯ ರೂವಾರಿಗಳಾಗಿದ್ದು, ಸರ್ಕಾರ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದರು.

ಪೌರಕಾರ್ಮಿಕರಿಗೆ 7 ಸಾವಿರ ರೂ. ವಿಶೇಷ ಭತ್ಯೆ ನೀಡಲಾಯಿತು. ವಿವಿಧ ಕ್ರೀಡೆಗಳನ್ನು ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು. ಪುರಸಭೆ ಉಪಾಧ್ಯೆ ಕಾಶವ್ವ ಹಿರೇಮೇತ್ರಿ, ಸದಸ್ಯರಾದ ಶ್ರೀಶೆಲ ನೇಗಿನಾಳ, ಈಶ್ವರ ಕರೀಕಟ್ಟಿ, ಪಂಚು ಬಾರಕೇರ ಸಮೀವುಲ್ಲಾ ಚೂರಿಖಾನ್​, ಆರೋಗ್ಯ ನಿರೀಕರಾದ ಬಿ.ಎಸ್​.ಹಲಗಿ, ಅಡಿವೆಪ್ಪ ಬೀರಸಿದ್ದಿ, ಯಲ್ಲಪ್ಪ ಭಜಂತ್ರಿ, ಸುರೇಶ ಮಾನೆ, ಬಾಬಾಜಾನ ಅತ್ತಾರ, ಅಭಿಷೇಕ ಬಾಳಿ, ವೀರು ಹೂಲಿ, ಬಸವರಾಜ ಹನಸಿ, ಮುದಕಪ್ಪ ಜಂಬಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net