ಪೌರ ಕಾರ್ಮಿಕರ ಸೇವೆ ಸ್ಮರಣೀಯ

The contribution of engineers to the development of the country is immense
ಇಳಕಲ್ಲದಲ್ಲಿ ವಿಶ್ವ ಪೌರಸೇವಾ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಸೇವಾ ನೌಕರರು ಜಾಗೃತಿ ಜಾಥಾ ನಡೆಸಿದರು. ಶಾರದಾ ಹೊಸಮನಿ, ಸಿಬ್ಬಂದಿ ವಿನಾಯಕ ಮುದಗಲ್ಲ, ಮಾಕರ್ಂಡೇಯ ಪುಲಪಾಟ್ಲಿ, ಪರಶುರಾಮ ನಾರಾಯಣಿ ಇತರರಿದ್ದರು.
Published on

ಇಳಕಲ್ಲ(ಗ್ರಾ): ಪ್ರತಿನಿತ್ಯ ಮಳೆ, ಬಿಸಿಲು, ಚಳಿ ಎನ್ನದೆ ನಗರದ ಸ್ವಚ್ಛತೆಗೆ ಟೊಂಕ ಕಟ್ಟಿ ನಿಲ್ಲುವ ಪೌರ ಕಾರ್ಮಿಕರ ಕಾರ್ಯ ದೇವರ ಪೂಜೆಗೆ ಸಮಾನ ಎಂದು ನಿವೃತ್ತ ಉಪನ್ಯಾಸಕ ರಾಮನಗೌಡ ಸಂದಿಮನಿ ಹೇಳಿದರು.

ನಗರದ ಸುವರ್ಣ ರಂಗಮಂದಿರದಲ್ಲಿ ವಿಶ್ವ ಪೌರ ಕಾರ್ಮಿಕ ದಿನಾಚರಣೆ ನಿಮಿತ್ತ ನಗರಸಭೆ ಪೌರ ಕಾರ್ಮಿಕರು ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಂತ ಮನೆಯನ್ನು ಸ್ವಚ್ಛ ಮಾಡಲು ಕುಟುಂಬದ ಸದಸ್ಯರು ಒದ್ದಾಡುವ ಇಂಥ ದಿನಗಳಲ್ಲಿ ಇಡೀ ಊರಿನ ಸ್ವಚ್ಛತೆ ಮಾಡುವ ಅದರಲ್ಲೂ ಗಬ್ಬು ನಾರುವ ಹೊಲಸಿನ ಜತೆಗೆ ಒದ್ದಾಡುವ ಪೌರ ಕಾರ್ಮಿಕರ ಕಾರ್ಯ ಸದಾ ಸ್ಮರಣೀಯ ಎಂದರು.

ಪೌರಾಯುಕ್ತ ಶ್ರೀನಿವಾಸ ಜಾಧವ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ವತಿಯಿಂದ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡಲಾಗಿದೆ. ಅವರ ಬಹುತೇಕ ವ್ಯವಸ್ಥೆಗಳನ್ನು ಸರ್ಕಾರ ಮಾಡಿಕೊಟ್ಟಿದೆ ಎಂದು ಹೇಳಿದರು.

ಪೌರ ಕಾರ್ಮಿಕರ ಆಟೋಟಗಳನ್ನು ನಡೆಸಿಕೊಟ್ಟ ಯೋಗ ಗುರು ಸಂಗಮೇಶ ಬಂಡರಗಲ್ಲ ಮತ್ತು ಶಿಕ್ಷಕ ಚಲವಾದಿ ಅವರನ್ನು ಸತ್ಕರಿಸಲಾಯಿತು. ಪೌರ ಕಾರ್ಮಿಕರಾದ ಯಲ್ಲಪ್ಪ ಮಾದರ, ಪರಸಪ್ಪ ಚಿಂತಕಮಲದಿನ್ನಿ, ಮಾನಪ್ಪ ಚಲವಾದಿ, ಹುಲಿಗೆಮ್ಮ ಚಲವಾದಿ, ಯಂಕಮ್ಮ ಚಲವಾದಿ ಮತ್ತು ನೀಲಮ್ಮ ಮಾದರ ಅವರನ್ನು ಪೌರಾಯುಕ್ತ ಶ್ರೀನಿವಾಸ ಜಾಧವ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಸತ್ಕರಿಸಿ ಗೌರವಿಸಿದರು.

ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಸೂಗುರೇಶ ನಾಗಲೋಟಿ, ಹನುಮಂತ ತುಂಬದ, ನಗರಸಭೆ ಮಾಜಿ ಅಧ್ಯಕ್ಷೆ ಶೋಭಾ ಆಮದಿಹಾಳ, ಮಾಜಿ ಉಪಾಧ್ಯಕ್ಷೆ ಸವಿತಾ ಆರಿ, ವಿಠ್ಠಲ ಮಾಸ್ಯಾಳ, ಪೌರಸೇವಾ ನೌಕರರ ಸಂಘದ ಅಧ್ಯಕ್ಷೆ ಶಾರದಾ ಹೊಸಮನಿ ಉಪಸ್ಥಿತರಿದ್ದರು.

ಮೆರವಣಿಗೆ: ವಿಶ್ವ ಪೌರಸೇವಾ ಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ಪೌರಸೇವಾ ನೌಕರರ ಜಾಗೃತಿ ಜಾಥಾ ಮತ್ತು ಕಾರ್ಮಿಕರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಮೆರವಣಿಗೆ ಕಂಠಿ ಸರ್ಕಲ್, ದ್ವಾರಕಾ ಲಾಜ್, ಗ್ರಾಮ ಚಾವಡಿ ಕಚೇರಿ, ಗಾಂಧಿ ಚೌಕ, ವೆಂಕಟೇಶ ದೇವಸ್ಥಾನ, ಬಸವನಗುಡಿ, ಸಾಲಪೇಟೆ ಬನಶಂಕರಿ ದೇವಾಲಯ, ಸಪ್ಪಂಡಿ ಅವರ ಮನೆ ಮಾರ್ಗವಾಗಿ ಸಂಚರಿಸಿ ಸುವರ್ಣ ರಂಗಮಂದಿರಕ್ಕೆ ಆಗಮಿಸಿ ಅಲ್ಲಿ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.

ಪೌರಸೇವಾ ನೌಕರರ ಸಂಘದ ಅಧ್ಯಕ್ಷೆ ಶಾರದಾ ಹೊಸಮನಿ, ಸಿಬ್ಬಂದಿ ವಿನಾಯಕ ಮುದಗಲ್ಲ, ಮಾಕರ್ಂಡೇಯ ಪುಲಪಾಟ್ಲಿ, ಪರಶುರಾಮ ನಾರಾಯಣಿ, ಬಸವರಾಜ ಕಿರಗಿ, ಮಹೇಶಕುಮಾರ, ಮಹಾಂತೇಶ ಚಲವಾದಿ, ಮಲ್ಲಪ್ಪ ಚಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net