ಸಮಾಜದಲ್ಲಿ ಹೆಚ್ಚುತ್ತಿದೆ ಕ್ರೌರ್ಯ ಪ್ರಜ್ಞೆ

5 nrp 2 (1)
ಎನ್.ಆರ್.ಪುರದಲ್ಲಿ ನಡೆದ ಮುಂಗಾರು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ರೇಖಾ ನಾಗರಾಜರಾವ್ ಅವರ ಮನದಂಗಳ ಕೃತಿಯನ್ನು ಡಾ.ಉದಯಶಂಕರ್ ಬಿಡುಗಡೆಗೊಳಿಸಿದರು. ಕಲ್ಕಟ್ಟೆ ನಾಗರಾಜ್, ಎಚ್.ಎಸ್.ಪೂರ್ಣೆಶ್, ಭಾಗ್ಯನಂಜುಂಡಸ್ವಾಮಿ, ಪಿ.ಕೆ.ಬಸವರಾಜ್, ರೇಖಾನಾಗರಾಜ್ ಇದ್ದರು.
Published on

ಎನ್.ಆರ್.ಪುರ: ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಸಾಹಿತ್ಯ ಪ್ರಜ್ಞೆ ಕಡಿಮೆಯಾಗಿ ಕ್ರೌರ್ಯ ಪ್ರಜ್ಞೆ ಹೆಚ್ಚಾಗುತ್ತಿದೆ ಎಂದು ಸಾಹಿತಿ ಕಲ್ಕಟ್ಟೆ ನಾಗರಾಜರಾವ್ ವಿಷಾದ ವ್ಯಕ್ತಪಡಿಸಿದರು.
ಶುಕ್ರವಾರ ತಾಲೂಕು ಕಸಾಪ ಮಹಿಳಾ ಘಟಕದ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂಗಾರು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸಾಹಿತ್ಯ ಸತ್ಯ, ಸಂಸ್ಕೃತಿ ನಿತ್ಯ ಎಂಬ ಕುರಿತು ಉಪನ್ಯಾಸ ನೀಡಿ, ಜನರು ತಮ್ಮೊಳಗಿನ ನಕಾರಾತ್ಮಕ ಅಂಶವನ್ನು ಬೇರೆಯವರಲ್ಲೂ ಕಾಣಲು ಹೋಗುತ್ತಾರೆ.ಇದು ಸರಿಯಲ್ಲ. ಪ್ರತಿಯೊಬ್ಬರಲ್ಲೂ ಸಕಾರಾತ್ಮಕ ಗುಣಗಳಿರುತ್ತದೆ. ಸಮಾಜದಲ್ಲಿ ಒಳ್ಳೆಯವರನ್ನು ಗುರುತಿಸಬೇಕು. ಕುವೆಂಪು ಬರೆದ ರಾಮಾಯಾಣ ದರ್ಶನಂ ಕೃತಿಯಲ್ಲೂ ರಾವಣನ ಮನಸ್ಸು ಪರಿವರ್ತನೆಗೂ ಪ್ರಯತ್ನ ಮಾಡಲಾಗಿದೆ.ನಮ್ಮೊಳಗಿರುವ ದೇವರನ್ನು ನಾವು ಗುರುತಿಸಬೇಕು. ಸಜ್ಜನರ ಗೆಳತನ ಮಾಡಬೇಕು. ಸಾಹಿತ್ಯ ಬದುಕು ಕಲಿಸುತ್ತದೆ. ದೊರೆ ಗೆಲ್ಲದಿದ್ದರೂ ನೆರೆಯವರನ್ನು ಗೆಲ್ಲಬೇಕು ಎಂಬುದನ್ನು ನಮಗೆ ಸಾಹಿತ್ಯ ಕಲಿಸಿದೆ ಎಂದರು.
ಪ್ರಾಚಾರ್ಯ ಡಾ.ಧನಂಜಯ ಮಾತನಾಡಿ, ಸಾಹಿತ್ಯ ನೈಜ ಘಟನೆಗಳನ್ನು ದಾಖಲು ಮಾಡುತ್ತದೆ. ಪ್ರತಿಯೊಬ್ಬರೂ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು.ಕುವೆಂಪು, ತೇಜಸ್ವಿ, ಶಿವರಾಮ ಕಾರಂತ, ಯು.ಆರ್.ಅನಂತಮೂರ್ತಿಯಂತಹ ಸಾಹಿತ್ಯ ಲೋಕದ ದಿಗ್ಗಜರು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಸಾಹಿತಿಗಳಿಗೆ ಜಾತಿ, ಧರ್ಮ, ಕುಲ ಇಲ್ಲ. ಎಲ್ಲರೂ ಒಂದೇ ಜಾತಿಗೆ ಸೇರಿದವರು ಎಂದರು.
ರೇಖಾ ನಾಗರಾಜರಾವ್ ಬರೆದ ಮನದಂಗಳ ಕೃತಿಯನ್ನು ಕೊಪ್ಪದ ಪ್ರಶಮನೀ ಆಸ್ಪತ್ರೆ ವೈದ್ಯ ಡಾ.ಉದಯಶಂಕರ್ ಹಾಗೂ ರೇಖಾ ಉದಯಶಂಕರ್ ಬಿಡುಗಡೆಗೊಳಿಸಿದರು. ಬರಹಗಾರ್ತಿ ಕು.ನಾಗಶ್ರೀ ಅವರನ್ನು ಸನ್ಮಾನಿಸಲಾಯಿತು. ಕಸಾಪ ಹೋಬಳಿ ಅಧ್ಯಕ್ಷೆ ಜುಬೇದ, ನಿಕಟಪೂರ್ವ ಅಧ್ಯಕ್ಷ ಪಿ.ಕೆ.ಬಸವರಾಜ್, ಮಹಿಳಾ ಘಟಕದ ನಿರ್ದೇಶಕಿ ಶ್ಯಾಮಲ ಸತೀಶ್, ಪ್ರಾಧ್ಯಾಪಕ ಪ್ರೊ.ಡಿ.ನಾಗೇಶಗೌಡ,ಬಿ.ಟಿ.ರೂಪ, ಆರ್.ಕೆ.ಪ್ರಸಾದ್, ಸಾಹಿತಿ ಜಯಮ್ಮ, ಮ್ಯಾಥ್ಯೂ, ನಂದಿನಿ ಆಲಂದೂರು, ಶಶಿಕಲಾ, ವಾಸಂತಿ, ಭಾನುಮತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net