

ಬೇಲೂರು: ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ಅಕ್ರಮ ಮದ್ಯವನ್ನು ಅಬಕಾರಿ ಉಪ ಆಯುಕ್ತರ ಆದೇಶದಂತೆ ಅಬಕಾರಿ ಉಪ ಅಧೀಕ್ಷಕ ಎಂ.ಎಚ್.ರಘು, ತಹಸೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್ ಸೇರಿದಂತೆ ಇತರರ ಸಮ್ಮುಖದಲ್ಲಿ ಶುಕ್ರವಾರ ನಾಶಪಡಿಸಲಾಯಿತು.
ಹಾಸನ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಎಚ್.ರಘು ಸುದ್ದಿಗಾರರೊಂದಿಗೆ ಮಾತನಾಡಿ, ಅಬಕಾರಿ ಮೊಕದ್ದಮೆ ಹಾಗೂ ಪೊಲೀಸ್ ಮೊಕದ್ದಮೆಗಳಲ್ಲಿ ವಶಕ್ಕೆ ಪಡೆದ 5 ಪ್ರಕರಣಗಳಲ್ಲಿ 486.465 ಲೀಟರ್ ಮದ್ಯ, 172.310 ಲೀಟರ್ ಬಿಯರ್, 6 ಲೀಟರ್ ಕಳ್ಳಭಟ್ಟಿ, 14.5 ಲೀಟರ್ ಬೆಲ್ಲದ ಕೊಳೆ ಹಾಗೂ ಇತರ ವಸ್ತುಗಳನ್ನು ನಾಶ ಪಡಿಸಿರುವುದಾಗಿ ತಿಳಿಸಿದರು.
ತಹಸೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್, ಅಬಕಾರಿ ನಿರೀಕ್ಷಕಿ ಎ.ಟಿ.ಚಂದನಾ, ಅಬಕಾರಿ ಉಪ ನಿರೀಕ್ಷಕ ಸಿ.ಹರೀಶ್ ಹಾಗೂ ಹಾಸನದ ಕೆಎಸ್‌ಬಿಎಲ್ ಡಿಪೋ-2 ವ್ಯವಸ್ಥಾಪಕರಿದ್ದರು.