ವಚನಗಳಲ್ಲಿದೆ ಆದರ್ಶ ಬದುಕಿನ ರಹಸ್ಯ

The secret to an ideal life lies in the verses.
ಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಜರುಗಿತು. ವಿಮಲಾ ಕುಬಕಡ್ಡಿ, ಈರಯ್ಯ ಹಿರೇಮಠ, ಡಿ.ಡಿ. ಕಾಂಬಳೆ, ಸಿ.ಎಸ್.ಝಳಕಿ, ಕರೆಪ್ಪ ಸಾಬಣ್ಣವರ, ವಿಜಯಲಕ್ಷ್ಮೀ ಝಳಕಿ ಮತ್ತಿತರರಿದ್ದಾರೆ.
Published on

ಜಮಖಂಡಿ: ಹನ್ನೆರಡನೇ ಶತಮಾನದ ಬಸವಾದಿ ಶರಣರು ರಚಿಸಿರುವ ವಚನಗಳಲ್ಲಿ ಕಾಯಕ ದಾಸೋಹ, ಸಾಮಾಜಿಕ ಚಿಂತನೆ, ಆದರ್ಶ ಬದುಕಿನ ರಹಸ್ಯ ಹಾಗೂ ಮಾನವೀಯ ಮೌಲ್ಯಗಳು ಅಡಗಿವೆ ಎಂದು ಉಪನ್ಯಾಸಕಿ ವಿಮಲಾ ಕುಬಕಡ್ಡಿ ಹೇಳಿದರು.

ತಾಲೂಕಿನ ಸಿದ್ದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನಗಳು ವಿಶ್ವ ಬಂಧುತ್ವ ನಾಗರಿಕ ಪ್ರಜ್ಞೆಯನ್ನು ಸೃಷ್ಟಿಸಬಲ್ಲ ಸಾಮರ್ಥ್ಯ ಹೊಂದಿವೆ. ಆದರ್ಶ ಬದುಕಿಗೆ ಸಹಜ ಸೂತ್ರ ಗಳಾಗಿದ್ದು ಸಕಲರಿಗೂ ಸಂಜೀವಿನಿಯಾಗಿವೆ ಎಂದರು.

ವೇದಮೂರ್ತಿ ಈರಯ್ಯ ಹಿರೇಮಠ ಮಾತನಾಡಿ, ಅಂತರಂಗದ ಕೊಳೆ ತೊಳೆಯಲು ವಚನಗಳು ಸಹಾಯಕವಾಗಿವೆ ಎಂದರು.

ಮುಖ್ಯೋಪಾಧ್ಯಾಯ ಡಿ.ಡಿ. ಕಾಂಬಳೆ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಸೋಮಪ್ಪ ತೆಗ್ಗಿ ಅಧ್ಯಕ್ಷತೆ ವಹಿಸಿದ್ದರು. ದತ್ತಿನಿಧಿ ದಾನಿಗಳಾದ ಸಿ.ಎಸ್.ಝಳಕಿ, ಕರೆಪ್ಪ ಸಾಬಣ್ಣವರ, ತಾಲೂಕು ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ ಝಳಕಿ, ಉಪಾಧ್ಯಕ್ಷ ಸಂಗಣ್ಣ ಸಂತಿ , ಎಸ್.ಬಿ. ಕುಬಕಡ್ಡಿ, ಗಣಪತಿ ಗಲಗಲಿ ಮತ್ತಿತರರಿದ್ದರು.

ಗೌರವ ಕಾರ್ಯದರ್ಶಿ ಗುರುನಾಥ ಸುತಾರ ಸ್ವಾಗತಿಸಿದರು. ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಇಂಡಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಸುರೇಖಾ ಕಣಬೂರ ನಿರೂಪಿಸಿದರು. ಶಿಕ್ಷಕ ಬಿ.ಬಿ. ನ್ಯಾಮಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net