

ಇಟಗಿ: ಭಾರತೀಯ ಹಬ್ಬ&ಹರಿದಿನಗಳು ಸಂಸತಿ, ಸಂಸ್ಕಾರ ನೀಡುವ ಜತೆಗೆ ಆರೋಗ್ಯ ಸಂಪತ್ತು ಸಂರಕ್ಷಣೆಗೆ ಸಹಕಾರಿಯಾಗಿವೆ ಎಂದು ಬಿಳಕಿ&ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಹೇಳಿದರು. ಸಮೀಪದ ಮುಗಳಿಹಾಳ ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ದ್ವಿಚಕ್ರ ವಾಹನ ನಿಧಾನವಾಗಿ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಯುವಕರು ದುಶ್ಚಟಗಳ ದಾಸರಾಗುತ್ತಿರುವುದು ಖೇದಕರ ಸಂಗತಿ. ಹೀಗಾಗಿ, ಉತ್ತಮ ಆಚಾರ, ವಿಚಾರ ರೂಢಿಸಿಕೊಂಡು ಮಾದರಿಯಾಗಿ ಬದುಕಬೇಕು ಎಂದರು. ಪಿಕೆಪಿಎಸ್ ಅಧ್ಯ ಮಾರುತಿ ಟಕ್ಕೇಕರ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆದಿಶಕ್ತಿ ಯುವಕ ಮಂಡಳ ವಾಹನ ನಿಧಾನವಾಗಿ ಓಡಿಸುವ ಸ್ಪರ್ಧೆ ಆಯೋಜಿಸಿರುವ ಕಾರ್ಯ
ಶ್ಲಾನೀಯ ಎಂದರು.ಶ್ರೀಕಾಂತ ತುಳಜಿ, ಬಸವರಾಜ ಗಿರಿಯಾಲ, ಸುನೀಲ ಕೂಗಿ, ದೇಮಣ್ಣ ಬಸರಿಕಟ್ಟಿ, ರಾಜು ಮಾದರ, ಶಂಕರ ದೇವಲತ್ತಿ, ರಮೇಶ ಬನೋಶಿ, ಮಂಜುನಾಥ ಅಷ್ಟೇಕರ, ವಿಷ್ಣು ಬನೋಶಿ ಇತರರಿದ್ದರು.