

ತುಮಕೂರು: ಬೆಳ್ಳಂಬೆಳಗ್ಗೆ ಗ್ರಾಮದಲ್ಲಿ ಕಾಣಿಸಿಕೊಂಡ ಎರಡು ಕರಡಿಗಳು ಕೆಲವೇ ನಿಮಿಷಗಳಲ್ಲಿ ನಾಪತ್ತೆಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಚಿಕ್ಕರಸನಹಳ್ಳಿ ಗ್ರಾಮದಲ್ಲಿ ಕರಡಿಗಳು ಕಾಣಿಸಿಕೊಂಡಿದ್ದವು, ಗ್ರಾಮಸ್ಥರು ಹಿಂದೆಯೇ ಓಡಿಸಿದ್ದರಿಂದ ಗಾಬರಿಯಾದ ಕರಡಿಗಳು ಅಲ್ಲೇ ಎಲ್ಲೋ ಬಚ್ಚಿಟ್ಟುಕೊಂಡಿವೆ.
ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಣ್ಣಿಗೂ ಕಾಣಿಸಿದ ಕರಡಿ ಕೆಲವೇ ಕ್ಷಣಗಳಲ್ಲಿ ಮಾಯವಾಗಿದೆ. ಇನ್ನು ಅರಣ್ಯ ಇಲಾಖೆಯಿಂದ ಕರಡಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್)