

ಮಡಿಕೇರಿ:
ಭಿಕ್ಷೆ ಬೇಡುವುದು ಸರ್ಕಾರದ ಕಾನೂನಿನ ಪ್ರಕಾರ ಸಾಮಾಜಿಕ ಅಪರಾಧ. ಈ ಹಿನ್ನೆಲೆಯಲ್ಲಿ ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಭಿಕ್ಷÄಕರಿಗೆ ಪುರ್ನವಸತಿ ಕಲ್ಪಿಸುವ ಉದ್ದೇಶದಿಂದ ಜನಸಾಮಾನ್ಯರಿಂದಲೂ ಸೆಸ್ ರೂಪದಲ್ಲಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಆದರೂ ಭಿಕ್ಷಾಟನೆಯ ಪಿಡುಗು ಸಂಪೂರ್ಣವಾಗಿ ಹೊಡೆದೋಡಿಸಲು ಇನ್ನೂ ಸಾಧ್ಯವಾಗಿಲ್ಲ. ಜನನಿಭಿಡ ಪ್ರದೇಶಗಳಲ್ಲೇ ಭಿಕ್ಷÄಕರ ಹಾವಳಿ ಮುಂದುವರಿದಿದ್ದರೂ ಅಧಿಕಾರಿಗಳು ಕಂಡುಕಾಣದAತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 3ರ ಪ್ರಕಾರ ರಾಜ್ಯದಲ್ಲಿ ಭಿಕ್ಷೆ ಬೇಡುವುದಕ್ಕೆ ನಿಷೇಧವಿದೆ. ಈ ಅಧಿನಿಯಮದ ಪ್ರಕಾರ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸರ್ಕಾರದಿಂದ ಅಧಿಕಾರ ಹೊಂದಿದ ಅಧಿಕಾರಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಬಂಧಿಸಲು ಅವಕಾಶವಿದೆ. ಭಿಕ್ಷಾಟನೆ ಮಾಡುತ್ತಿರುವವರನ್ನು ಬಂಧಿಸಿ ಕ್ರಮ ತೆಗೆದುಕೊಂಡು ತಾಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಿ ಅವರ ಆದೇಶದನ್ವಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳಿಸಬೇಕಾಗುತ್ತದೆ. ಭಿಕ್ಷುಕರು ಅಥವಾ ನಿರಾಶ್ರಿತರ ಬಂಧನದ ಅವಧಿ ಕನಿಷ್ಠ 1 ವರ್ಷದಿಂದ ಗರಿಷ್ಠ 3 ವರ್ಷದವರೆಗೆ ಇರುತ್ತದೆ. ಇಷ್ಟೆಲ್ಲಾ ಇರುವ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೆ ಎಲ್ಲಿಯೂ ಭಿಕ್ಷÄಕರನ್ನು ಕಾಣಲು ಸಾಧ್ಯವಿರುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಹಣ, ಬೇಯಿಸಿದ ಅಥವಾ ಬೇಯಿಸದ ಆಹಾರ ಧಾನ್ಯಗಳನ್ನು ಅಥವಾ ಬಟ್ಟೆಬರೆ ಮತ್ತಿತರ ವಸ್ತುಗಳು ಅಥವಾ ಮೌಲ್ಯ ಇರುವ ಇತರ ಯಾವುದೇ ವಸ್ತುವನ್ನು ಭಿಕ್ಷುಕನಿಗೆ ಪುಕ್ಕಟೆಯಾಗಿ ಕೊಟ್ಟರೆ ಅದನ್ನು ಭಿಕ್ಷೆ ಎಂದು ವ್ಯಾಖ್ಯಾನಿಸುತ್ತದೆ ಕಾನೂನು. ಹದಿನಾರು ವರ್ಷ ತುಂಬಿರದ ಹುಡುಗ ಅಥವಾ ಹದಿನೆಂಟು ವರ್ಷ ತುಂಬಿರದ ಹುಡುಗಿ ಹೊರತುಪಡಿಸಿ ಯಾರಾದರೂ ಹಾಡುವುದು, ಕುಣಿಯುವುದು, ಭವಿಷ್ಯ ಹೇಳುವುದು, ಕೈ ಚಳಕಗಳನ್ನು ಮಾಡಿ ತೋರಿಸುವುದು ಅಥವಾ ವಸ್ತುಗಳನ್ನು ಮಾರುವುದು ಸೇರಿದಂತೆ ಯಾವುದೇ ಸೋಗಿನಿಂದಾಗಲಿ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷೆ ಕೇಳುವ ಅಥವಾ ಸ್ವೀಕರಿಸುವವರು, ಭಿಕ್ಷೆಯಾಚಿಸುವ ಅಥವಾ ಸ್ವೀಕರಿಸುವ ಉದ್ದೇಶಕ್ಕಾಗಿ ಯಾವುದೇ ಖಾಸಗಿ ಸ್ಥಳವನ್ನು ಪ್ರವೇಶಿಸುವವರು, ಭಿಕ್ಷೆಯನ್ನು ಪಡೆಯುವ ಉದ್ದೇಶದಿಂದ ಮನುಷ್ಯನ ಅಥವಾ ಪ್ರಾಣಿಯ ಯಾವುದೇ ಹುಣ್ಣು, ಗಾಯ, ಅಂಗವಿಕಲತೆ ಅಥವಾ ರೋಗವನ್ನು ಕಾಣುವ ಹಾಗೆ ತೋರಿಸುವ ಅಥವಾ ಪ್ರದರ್ಶಿಸುವವರು, ಯಾವುದೇ ಜೀವನ ನಿರ್ವಹಣೋಪಾಯವಿಲ್ಲದೆ, ಭಿಕ್ಷೆ ಯಾಚಿಸುವ ಅಥವಾ ಸ್ವೀಕರಿಸುವ ಮೂಲಕವೇ ತಾನು ಜೀವಿಸುತ್ತಿರುವೆನೆಂಬ ಸ್ಥಿತಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುವವರರನ್ನು ಭಿಕ್ಷÄಕರು ಎಂದು ಪರಿಗಣಿಸಲಾಗುತ್ತದೆ.
ಭಿಕ್ಷೆ ಬೇಡುವುದು ಸರ್ಕಾರದ ಕಾನೂನಿನ ಪ್ರಕಾರ ಸಾಮಾಜಿಕ ಅಪರಾಧವಾಗಿದ್ದು, ಭಿಕ್ಷೆ ನೀಡುವ ಮೂಲಕ ಭಿಕ್ಷಾಟನೆಗೆ ಪ್ರೋತ್ಸಾಹ ನೀಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತದೆ. ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹಿರಾತು, ಜಿಲ್ಲಾ, ತಾಲೂಕು ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ, ವಿವಿಧ ರೈಲುಗಳಲ್ಲಿ ಭಿಕ್ಷಾಟನಾ ನಿಷೇಧದ ಬಗ್ಗೆ ಜಾಹಿರಾತಿನ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಸಾರ್ವಜನಿಕರು ಭಿಕ್ಷುಕರ ಕುರಿತು ದೂರು ನೀಡಲು ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಕೇಂದ್ರವು 24*7 ಕಾರ್ಯನಿರ್ವಹಿಸುತ್ತಿದ್ದು, ಇದರ ಮೂಲಕ ಭಿಕ್ಷುಕರ ಉಚಿತ ಸಹಾಯವಾಣಿ ಸಂಖ್ಯೆ 10581 ಮತ್ತು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರ ದೂರವಾಣಿ ಸಂಖ್ಯೆ 080-295561580 ಕ್ಕೆ ರಾಜ್ಯದ ಯಾವುದೇ ಭಾಗದಲ್ಲಿ ಭಿಕ್ಷುಕರು ಕಂಡುಬAದಲ್ಲಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರ ಮಾಹಿತಿ ಕೊಡುತ್ತದೆ.
ಬೀಕ್ಷÄಕರ ನಿರಾಶ್ರಿತ ಕೇಂದ್ರಗಳ ನಿರ್ವಹಣೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಆಗುವುದಿಲ್ಲ, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿAದ ಭೂಮಿ ಮತ್ತು ಕಟ್ಟಡಗಳ ಮೇಲೆ ಶೇ 3ರಷ್ಟು ಭಿಕ್ಷುಕರ ಸೆಸ್ ಪಡೆಯಲಾಗುತ್ತಿದೆ. ಈ ಮೊತ್ತವೇ ವಾರ್ಷಿಕವಾಗಿ ಲಕ್ಷಾಂತರ ರೂ. ದಾಟುತ್ತದೆ. ಕೊಡಗಿನಲ್ಲೂ ಇಲ್ಲಿರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿಗಳ ಮೂಲಕ ಭೂಮಿ ಮತ್ತು ಕಟ್ಟಡಗಳ ಮೇಲೆ ಶೇ 3ರಷ್ಟು ಸೆಸ್ ವಸೂಲು ಮಾಡಲಾಗುತ್ತಿದ್ದು, ಕಳೆದ 10 ವರ್ಷಗಳಲ್ಲಿ 2.32 ಕೋಟಿ ರೂ. ಸಂಗ್ರಹವಾಗಿದೆ.
2014-15ನೇ ಸಾಲಿನಲ್ಲಿ 7.66 ಲಕ್ಷ ರೂ., 2015-16ನೇ ಸಾಲಿನಲ್ಲಿ 12.45 ಲಕ್ಷ ರೂ., 2016-17ನೇ ಸಾಲಿನಲ್ಲಿ 14.76 ಲಕ್ಷ ರೂ., 2017-18ನೇ ಸಾಲಿನಲ್ಲಿ 15.46 ಲಕ್ಷ ರೂ., 2018-19ನೇ ಸಾಲಿನಲ್ಲಿ 17.16 ಲಕ್ಷ ರೂ., 2019-20ನೇ ಸಾಲಿನಲ್ಲಿ 30.33 ಲಕ್ಷ ರೂ., 2020-21ನೇ ಸಾಲಿನಲ್ಲಿ 13.58 ಲಕ್ಷ ರೂ., 2021-22ನೇ ಸಾಲಿನಲ್ಲಿ 27.35 ಲಕ್ಷ ರೂ., 2022-23ನೇ ಸಾಲಿನಲ್ಲಿ 61.23 ಲಕ್ಷ ರೂ. ಹಾಗೂ 2023-24ನೇ ಸಾಲಿನಲ್ಲಿ 31.92 ಲಕ್ಷ ರೂ. ಭಿಕ್ಷÄಕರ ಸೆಸ್ ಕೊಡಗಿನಲ್ಲಿ ಸಂಗ್ರಹವಾಗಿರುವುದಾಗಿ ಹೇಳುತ್ತದೆ ಸಮಾಜ ಕಲ್ಯಾಣ ಇಲಾಖೆಯ ಅಂಕಿ-ಅAಶ.
ಹೀಗೆ ಸ್ಥಳೀಯ ಸಂಸ್ಥೆಗಳ ಮೂಲಕ ಸಂಗ್ರಹವಾಗುವ ಹಣ ಕೇಂದ್ರ ಪರಿಹಾರ ಸಮಿತಿ ಮತ್ತು ಇದರ ಅಧೀನದ 14 ಪರಿಹಾರ ಕೇಂದ್ರಗಳ ನಿರ್ವಹಣೆ, ಅಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಮೂಲಭೂತ ಸೌಕರ್ಯಗಳಾದ ಉಚಿತ ಊಟ, ತಿಂಡಿ, ವಸತಿ, ಔಷಧೋಪಚಾರ ಸಮವಸ್ತ್ರ, ಹಾಸಿಗೆ ಹೊದಿಕೆಗಳನ್ನು ಒದಗಿಸಲು ಮತ್ತು ವಿವಿಧ ವೃತ್ತಿಗಳಲ್ಲಿ ತರಬೇತಿಗಳನ್ನು ನೀಡಲು ಬಳಸಲಾಗುತ್ತದೆ. ಹೀಗೆ ತರಬೇತಿ ಪಡೆದ ನಿರಾಶ್ರಿತರಿಗೆ ದಿನಗೂಲಿಯನ್ನೂ ಕೊಡಲಾಗುತ್ತದೆ. ಮೂಲಭೂತ ಸೌಕರ್ಯಗಳಿಗಾಗಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ, ಸಿಬ್ಬಂದಿ ವೇತನ ಹಾಗೂ ಹೊಸದಾಗಿ ಸ್ಥಾಪಿಸಲಾಗುವ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲು ಬಳಕೆ ಆಗುತ್ತಿದೆ ಎನ್ನುತ್ತದೆ ಸರ್ಕಾರ.
ಭಿಕ್ಷಾಟನೆಗೆ ನಿರ್ಬಂಧ ಮತ್ತು ನಿರ್ಮೂಲನೆಗೆ ಕಾನೂನಿನಲ್ಲೇ ಬೇಕಾದಷ್ಟು ಅವಕಾಶಗಳಿದ್ದು, ಸಾರ್ವಜನಿಕರಿಂದಲೇ ಸೆಸ್ ಸಂಗ್ರಹ ಮಾಡುತ್ತಿದ್ದರೂ ಭಿಕ್ಷಾಟನೆಯ ಪಿಡುಗು ಇನ್ನು ಕೂಡ ಮುಂದುವರಿದಿದೆ. ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನನಿಭಿಡ ಪ್ರದೇಶಗಳಲ್ಲಿ ಈಗಲೂ ಭಿಕ್ಷÄಕರು ಕಂಡುಬರುತ್ತಾರೆ. ಅದರಲ್ಲೂ ಎಳೆ ಕಂದಮ್ಮಗಳನ್ನು ಕಂಕಳಿನಲ್ಲಿ ಇಟ್ಟುಕೊಂಡು ಭಿಕ್ಷೆ ಬೇಡುವ ಮಹಿಳೆಯರ ಸಂಖ್ಯೆ ಹೆಚ್ಚು ಇದೆ. ಸರ್ಕಾರ ಕೊಟ್ಟಿರುವ ಅವಕಾಶಗಳನ್ನು ಬಳಸಿಕೊಂಡು ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರೆ ಭಿಕ್ಷಾಟನೆಯ ನಿರ್ಮೂಲನೆ ಕಷ್ಟವೇನೂ ಅಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಮಾತು.
ಭಿಕ್ಷಾಟನೆ ಪಿಡುಗು ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಭಿಕ್ಷೆ ಬೇಡುವುದು ಸರ್ಕಾರದ ಕಾನೂನಿನ ಪ್ರಕಾರ ಸಾಮಾಜಿಕ ಅಪರಾಧವಾಗಿದ್ದು, ಭಿಕ್ಷೆ ನೀಡುವ ಮೂಲಕ ಭಿಕ್ಷಾಟನೆಗೆ ಪ್ರೋತ್ಸಾಹ ನೀಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹಿರಾತು, ಜಿಲ್ಲಾ, ತಾಲೂಕು ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ, ವಿವಿಧ ರೈಲುಗಳಲ್ಲಿ ಭಿಕ್ಷಾಟನಾ ನಿಷೇಧದ ಬಗ್ಗೆ ಜಾಹಿರಾತಿನ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಭಿಕ್ಷÄಕರ ಸೆಸ್ ಮೂಲಕ ಸಂಗ್ರಹವಾಗುವ ಹಣವನ್ನು ಕೇಂದ್ರ ಪರಿಹಾರ ಸಮಿತಿ ಮತ್ತು ಇದರ ಅಧೀನದ 14 ಪರಿಹಾರ ಕೇಂದ್ರಗಳ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ.
ಡಾ. ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ
ಭಿಕ್ಷೆ ಬೇಡುವುದು ಮಾತ್ರವಲ್ಲ, ಭಿಕ್ಷೆ ಕೊಡುವುದನ್ನೂ ಅಪರಾಧ ಎಂದು ನಾವು ತಿಳಿದುಕೊಳ್ಳಬೇಕು. ಭಿಕ್ಷÄಕರು ಬಂದಾದ ಅಯ್ಯೋ ಪಾಪ ಎಂದು ಮರುಗಿ ಭಿಕ್ಷೆ ಕೊಟ್ಟು ಅವರನ್ನು ಪ್ರೋತ್ಸಾಹಿಸುವ ಬದಲು ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಪುನರ್ವಸತಿ ಕೇಂದ್ರಗಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು. ದೈಹಿಕವಾಗಿ ಸದೃಢರಾಗಿರುವವರೂ ಭಿಕ್ಷೆ ಬೇಡುವುದು ನೋಡುವಾಗ ವ್ಯವಸ್ಥೆ ಬಗ್ಗೆ ಬೇಸರ ಆಗುತ್ತದೆ. ನಮ್ಮಲ್ಲಿಗೆ ಪ್ರತಿನಿತ್ಯ ಭಿಕ್ಷÄಕರು ಬರುತ್ತಾರೆ. ಆದರೆ ಭಿಕ್ಷೆ ಕೊಡುವ ಪರಿಪಾಟ ನಾವು ಇಟ್ಟುಕೊಂಡಿಲ್ಲ.
ಎನ್.ಕೆ. ಮೋಹನ್‌ಕುಮಾರ್, ಉದ್ಯಮಿ, ಕುಶಾಲನಗರ