ಶಾಲಾ ದೇಗುಲ ಮರೆಯಬಾರದು

27BTP01
ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗುರುವಂದನೆ ಹಾಗೂ ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ ವಿತರಣಾ ಸಮಾರಂಭ ನಡೆಯಿತು. ಎಸ್.ಸಿ.ಮಹೇಶ್, ಸಿ.ಪಿ.ರಾಮಚಂದ್ರ, ಬಿ.ಜಿ.ಜಗದೀಶ್, ಕೆ.ವಿ.ಪುಷ್ಪಾ, ಜಯಮ್ಮಣ್ಣಿ, ಬಸವರಾಜು, ಆಶಾ, ಶಿವಾನಂದ್, ಆಶಾ, ನಾಗೇಂದ್ರಾರಾಧ್ಯ, ಭಾಗ್ಯಾ ಇತರರಿದ್ದರು.
Published on

ಬೆಟ್ಟದಪುರ: ಅಕ್ಷರ ಕಲಿಸಿದ ಗುರು, ಜ್ಞಾನ ದಾಹ ತಣಿಸಿದ ಶಾಲಾ ದೇಗುಲವನ್ನು ನಾವು ಎಂದಿಗೂ ಮರೆಯಬಾರದು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪಕಾರ್ಯದರ್ಶಿ ಎಸ್.ಸಿ.ಮಹೇಶ್ ತಿಳಿಸಿದರು.

ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಗುರುವಂದನೆ ಹಾಗೂ ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲೆಗೆ ಆಗಮಿಸುವ ಮಕ್ಕಳಿಗೆ ಜ್ಞಾನ ನೀಡಿ ಸಂಸ್ಕಾರ ತುಂಬುವ ಗುರುಗಳೇ ನಿಜವಾದ ರಾಷ್ಟ್ರ ನಿರ್ಮಾತೃಗಳಾಗಿದ್ದು, ಅವರು ನೀಡುವ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ನಿರ್ದಿಷ್ಟ ಗುರಿಯನ್ನು ತಲುಪಬೇಕು. ಕಲಿತ ಶಾಲೆಯನ್ನು ನೆನೆದು ಅದರ ಪೂರಕ ಅಭಿವೃದ್ಧಿಗಾಗಿ ಸಹಕರಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ನೆರವು ನೀಡಬೇಕು ಎಂದರು.

ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಶಿಕ್ಷಣ ತಜ್ಞ ಬಿ.ಜಿ.ಜಗದೀಶ್ ಮಾತನಾಡಿ, ಶಾಲೆಯು 75 ವಸಂತಗಳನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಎಲ್ಲರೂ ಒಟ್ಟಾಗಿ ಸೇರಿ ಅಮೃತ ಮಹೋತ್ಸವ ಆಚರಿಸುವ ಹಾಗೂ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಿರಿಯ ಶಿಕ್ಷಕ ಸಿ.ಪಿ.ರಾಮಚಂದ್ರ, ಬಿ.ಜಿ.ಜಗದೀಶ್, ಕೆ.ವಿ.ಪುಷ್ಪಾ, ಜಯಮ್ಮಣ್ಣಿ, ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಕೋದಂಡರಾಮ್, ಎಂ.ಮಲ್ಲೇಶ್, ನಟರಾಜ್, ಮಹೇಶ್, ವೆಂಕಟೇಶ್, ಶಿವಾನಂದ್, ಆಶಾ, ನಾಗೇಂದ್ರಾರಾಧ್ಯ, ಬಿ.ಟಿ.ಸಣ್ಣಸ್ವಾಮಿಗೌಡ, ವಿಶ್ವನಾಥ್, ಲತಾ, ಇರ್ಷಾನ್ ಪಾಷ, ರವಿಕುಮಾರ್, ಚಂದ್ರಶೇಖರ್, ಮಹೇಶ್ ಚಂದ್ರಿಕಾ, ತೊಂಟಪ್ಪ, ಕಾಂತ, ಭಾಗ್ಯಾ, ಪುಷ್ಪಲತಾ, ಗಿರಿಜಾ, ಜಯಶ್ರೀ, ಸುರೇಶ್, ಕುಮಾರ್, ಉಪ ಪ್ರಾಂಶುಪಾಲ ಮಂಜೇಗೌಡ ಹಾಗೂ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net