ಜೋಡಿ ಚಿರತೆ ಸಂಚಾರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

 ನಾಗಮಂಗಲ ತಾಲೂಕಿನ ಕುರಿಕೊಪ್ಪಲು ಗ್ರಾಮದ ಮನೆಯೊಂದರ ಸುತ್ತ ಜೋಡಿ ಚಿರತೆ ಸಂಚರಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
ನಾಗಮಂಗಲ ತಾಲೂಕಿನ ಕುರಿಕೊಪ್ಪಲು ಗ್ರಾಮದ ಮನೆಯೊಂದರ ಸುತ್ತ ಜೋಡಿ ಚಿರತೆ ಸಂಚರಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
Published on

ನಾಗಮಂಗಲ: ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಎಚ್.ಕೋಡಿಹಳ್ಳಿ ವ್ಯಾಪ್ತಿಯ ಕುರಿಕೊಪ್ಪಲು ಗ್ರಾಮದ ಮನೆಯೊಂದರ ಸುತ್ತ ಜೋಡಿ ಚಿರತೆ ಸಂಚರಿಸುವ ದೃಶ್ಯ ಸಿಸಿ ಟಿವಿ ಕ್ಯಾಮರಾದದಲ್ಲಿ ಸೆರೆಯಾಗಿದೆ.

ಗ್ರಾಮದ ನಿವಾಸಿ ಹರೀಶ್ ಅವರ ಮನೆಯ ಬಳಿ ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿನಲ್ಲಿ ಜೋಡಿ ಚಿರತೆ ಮನೆಯ ಬಳಿ ಸಂಚರಿಸಿ ಜಾನುವಾರುಗಳನ್ನು ತಿನ್ನಲು ಹುಡುಕಾಟ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿರತೆಗಳು ಗ್ರಾಮದೊಳಕ್ಕೆ ಬಂದಿರುವುದನ್ನು ಕಂಡ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮವಹಿಸಿ ಚಿರತೆಗಳನ್ನು ಸೆರೆ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವರ್ಷದಿಂದಲೂ ಚಿರತೆಗಳ ಸಂಚಾರವಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಚಿರತೆ ಬಂದು ಹೋಗಿರುವ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net