ವೈವಿಧ್ಯತೆಯ ಬಿಜ್ಜೂರು ಸೀಮೆಯ ಹಗರಣ

gkn HAgarana
Published on

ಗೋಕರ್ಣ: ಈ ಭಾಗದ 12 ಹಾಲಕ್ಕಿ ಒಕ್ಕಲಿಗರ ಸೀಮೆಯ ಸುಗ್ಗಿ ಹಬ್ಬದ ನಿಮಿತ್ತ ಇಲ್ಲಿನ ಬಿಜ್ಜೂರು ಸೀಮೆ ವತಿಯಿಂದ ಸುಗ್ಗಿ ಆಚರಿಸಿ ಸೋಮವಾರ ರಾತ್ರಿ ರಥಬೀದಿಯಲ್ಲಿ ವೈವಿಧ್ಯತೆಗಳಿಂದ ಕೂಡಿದ ಹಗರಣ ಆಯೋಜಿಸಲಾಯಿತು.

ವಿಡಂಬನಾತ್ಮಕವಾದ ಹಗರಣದಲ್ಲಿ ವರ್ತಮಾನದ ಸಾಮಾಜಿಕ ಸ್ಥಿತಿಗತಿಗಳು ಮತ್ತು ಬಡ ಕೃಷಿಕರ ಬದುಕು ಪರಿಚಯಿಸುವ ರೂಪಕಗಳು ಮೂಡಿಬಂದವು.

ಶಿರೂರು ಗುಡ್ಡ ಕುಸಿತದ ವೇಳೆಯ ಕಾರ್ಯಾಚರಣೆಯಲ್ಲಿರುವ ಜಿಲ್ಲಾ ಎಸ್​ಪಿ, ಶಾಸಕ ಸತೀಶ ಸೈಲ್ ಮತ್ತಿತರ ಪ್ರಮುಖರು, ಸಾಂಪ್ರದಾಯಿಕ ಉಡುಪಿನಲ್ಲಿರುವ ಕೃಷಿಕ ಹಾಲಕ್ಕಿ ಒಕ್ಕಲಿಗ ಮಹಿಳೆಯ ಕುಟುಂಬ, ಹಾಲಕ್ಕಿ ಒಕ್ಕಲಿಗರ ಶ್ರಮದಾಯಕ ಬದುಕಿನ ವಿವಿಧ ಬಗೆಗಳು, ಒನಕೆ ಓಬವ್ವ, ಅಗ್ನಿಶಾಮಕ ಕಾರ್ಯಾಚರಣೆ, ಬಾವಿಯಲ್ಲಿ ಬಿದ್ದ ರೈತನ ರಕ್ಷಣೆ ಮತ್ತಿತರ ಸನ್ನಿವೇಶಗಳ ಯಥಾವತ್ ರೂಪಕಗಳನ್ನು ನಾಲ್ಕು ತಾಸಿಗೂ ಅಧಿಕ ಸಮಯ ಪ್ರದರ್ಶಿಸುವ ಮೂಲಕ ಸೇರಿದ ಅಪಾರ ಪ್ರೇಕ್ಷಕರ ಮೆಚ್ಚುಗೆ ಗಳಿಸಲಾಯಿತು.

ರಾತ್ರಿ 9 ಗಂಟೆಗೆ ಪ್ರಾರಂಭವಾದ ಹಗರಣ ಮಧ್ಯ ರಾತ್ರಿ ಒಂದೂ ತಾಸಿಗೂ ಹೆಚ್ಚು ಸಮಯ ಮುಂದುವರಿದಿದ್ದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net