ರಕ್ತದಾನದಲ್ಲಿದೆ ಜೀವ ಉಳಿಸುವ ತೃಪ್ತಿ

24dwd1
Published on

ದೊಡವಾಡ: ರಕ್ತದಾನ ಮಾಡುವುದು ಅತ್ಯುತ್ತಮ ಕೆಲಸವಾಗಿದ್ದು, ಅದರಿಂದ ದೇಹದ ಕಬ್ಬಿಣಾಂಶ ಪ್ರಮಾಣದಲ್ಲಿ ಸಮತೋಲನ ಕಂಡು ಬರುತ್ತದೆ ಎಂದು ಗ್ರಾಪಂ ಅಧ್ಯೆ ಸಂಗೀತಾ ಚಂದರಗಿ ಹೇಳಿದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಪಂ, ಜಿಲ್ಲಾ/ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತ ನೀಡುವುದರಿಂದ ಇನ್ನೊಬ್ಬರ ಜೀವ ಉಳಿಸಿದಂತಾಗುತ್ತದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೆದ್ಯಾಧಿಕಾರಿ ಅಜಯ ದೋಡಿ ಮಾತನಾಡಿ, ರಕ್ತದಾನದಿಂದ ಹೊಸ ರಕ್ತ ಉತ್ಪಾದನೆಯಾಗಿ ಆರೋಗ್ಯ ಸುಧಾರಣೆ ಆಗುವ ಜತೆಗೆ ಜೀವ ಉಳಿಸುವ ಸಾರ್ಥಕ ಮನೋಭಾವ ಇರುತ್ತದೆ ಎಂದರು. 40 ಜನರು ರಕ್ತದಾನ ಮಾಡಿದರು. ಗ್ರಾಪಂ ಉಪಾಧ್ಯೆ ಶೋಭಾ ಮಡಿವಾಳರ, ಗ್ರಾಪಂ ಸದಸ್ಯರಾದ ನಾಗಯ್ಯ ದಾಬಿಮಠ, ಸಕ್ಕುಬಾಯಿ ಕಾಳೆ, ವಿಜಯಾ ಪಾಟೀಲ, ಕಾಶವ್ವ ಶಿವದೂತನ್ನವರ, ಶಿವಶಂಕರ ಅರಳಿಮರದ, ಡಾ.ಐಶ್ವರ್ಯಾ ದಾಮೋದರನ, ಎನ್​.ಡಿ.ಕಾಡೆ, ಪ್ರಕಾಶ ಮಾನೆ, ಕಲ್ಮೇಶ ಹಮ್ಮನ್ನವರ, ಹಿರಿಯ ಆರೋಗ್ಯ ನಿರೀಕ ಸೋಮಶೇಖರ ಕಂಬಾರ, ಪುಂಡಲಿಕ ನಾಯ್ಕರ ಮತ್ತು ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net