

ಗೋಕಾಕ: ಹೋರಾಟಗಾರರ ತ್ಯಾಗ, ಬಲಿದಾನದ ಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.
ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಹಾಗೂ ಶಿಣ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯ ಉಳಿಸಿ, ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ, ಸ್ವಾತಂತ್ರ್ಯ ಸೇನಾನಿಗಳ ದೇಶಪ್ರೇಮ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಾಂಸತಿಕ ಕಾರ್ಯಕ್ರಮ ಪ್ರದರ್ಶಿಸಿ ಗಮನ ಸೆಳೆದರು.
ನರಗಸಭೆ ಅಧ್ಯ ಪ್ರಕಾಶ ಮುರಾರಿ, ಉಪಾಧ್ಯೆ ಬೀಬಿಬತುಲ್ ಜಮಾದಾರ, ಡಿವೈಎಸ್ಪಿ ರವಿ ನಾಯಿಕ, ಸಿಪಿಐ ಸುರೇಶಬಾಬು , ಅಶೋಕ ಪೂಜಾರಿ, ಬಿಇಒ ಜಿ.ಬಿ.ಬಳಗಾರ, ಪೌರಾಯುಕ್ತ ರವಿ ರಂಗಸಭೆ , ತಾಪಂ ಇಒ ಪರಶುರಾಮ ಗಸ್ತೆ, ಹಿರಿಯ ವಕೀಲ ಬಿ.ಆರ್.ಕೊಪ್ಪ, ಎಂ.ಎಲ್.ಜನ್ಮಟ್ಟಿ, ಎಂ.ಎಂ.ನದ್ಾ, ಎಂ.ಎಚ್.ಗಜಾಕೋಶ, ಡಾ.ಎಂ.ಎಸ್.ಕೊಪ್ಪದ, ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಸೋಮಶೇಖರ ಮಗದುಮ್ಮ ಇತರರಿದ್ದರು.