ಯೋಧರ ತ್ಯಾಗ ಎಲ್ಲರಿಗೂ ಸ್ಫೂರ್ತಿ

11mkh1
Published on

ಎಂ.ಕೆ.ಹುಬ್ಬಳ್ಳಿ: ಪ್ರಾಣದ ಹಂಗು ತೊರೆದು ದೇಶ ರಕ್ಷಣೆಗೆ ಶ್ರಮಿಸುವ ಯೋಧರ ದೇಶಪ್ರೇಮ, ತ್ಯಾಗ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಬಿಳಕಿ-ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಹೇಳಿದರು.

ಸಮೀಪದ ವೀರಾಪುರ ಗ್ರಾಮದಲ್ಲಿ ಶ್ರೀ ಸತ್ಯಮ್ಮದೇವಿ ಜಾತ್ರೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ನಿಜವಾದ ದೇಶದ ಹೀರೋ ಸೈನಿಕ ಎಂಬ ವಿಷಯದ ಕುರಿತು ಮಾತನಾಡಿದರು. ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಕೆಎಂಎ್ ನಿರ್ದೇಶಕ ಡಾ.ಬಸವರಾಜ ಪರವಣ್ಣವರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಂಸ್ಕೃತಿ, ಪರಂಪರೆ ಮರೆಯಾಗುತ್ತಿವೆ. ಹೀಗಾಗಿ, ಪ್ರತಿಯೊಬ್ಬರೂ ಸಾಧು-ಸಂತರ ಪ್ರವಚನ ಆಲಿಸುವ ಮೂಲಕ ಸಂಸ್ಕಾರವಂತರಾಗಬೇಕು ಎಂದರು.

ಕಾಂಗ್ರೆಸ್ ಮುಖಂಡ ಹಬೀಬ್ ಶಿಲೇದಾರ್, ಘಟ್ಟಪ್ರಭಾದ ಬಸವದೇವರು, ಹೂಲಿಕಟ್ಟಿ ಹೊಸಕೇರಿಮಠದ ಲಿಂಗಾನಂದ ಪ್ರಭುಗಳು, ಶಿದ್ರಾಮಯ್ಯ ಹಿರೇಮಠ, ಬಸನಗೌಡ ಶಿದ್ರಾಮನಿ, ರುದ್ರಗೌಡ ಹಟ್ಟಿಹೊಳಿ, ವೀರಭದ್ರಯ್ಯ ಗುಂಡಕಲ್ಲಮಠ, ಪತ್ರಕರ್ತ ಶಿವಾನಂದ ವಿಭೂತಿಮಠ, ಸಿದ್ದನಗೌಡ ಪಾಟೀಲ, ಮಡಿವಾಳಯ್ಯ ಹಿರೇಮಠ, ನಿವೃತ್ತ ಯೋಧ ರುದ್ರಗೌಡ ಬರಗಾಂವಿ ಇತರರಿದ್ದರು. ಶಿವಯ್ಯ ಗುಂಡಕಲ್ಲಮಠ ಸ್ವಾಗತಿಸಿದರು. ಯಲ್ಲಪ್ಪ ಕಾದ್ರೊಳ್ಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net