ಯೋಧರ ತ್ಯಾಗ ಅವಿಸ್ಮರಣೀಯ

The sacrifice of the soldiers is unforgettable.
ಗುಳೇದಗುಡ್ಡದಲ್ಲಿ ನಾಕಾಪಡೆ ನಿವೃತ್ತ ಯೋಧ ಶಂಕರಲಿಂಗ ಹಾವರಗಿ ದಂಪತಿಯನ್ನು ಸನ್ಮಾನಿಸಲಾಯಿತು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಭಾಸ ಕೋಟಿ, ಈರಣ್ಣ ಪಟ್ಟಣಶೆಟ್ಟಿ, ನಾಗರಾಜ ಪಟ್ಟಣಶೆಟ್ಟಿ, ಶಿವಪ್ಪ ಯಡಹಳ್ಳಿ, ಚಂದ್ರು ಪಟ್ಟಣಶೆಟ್ಟಿ ಇದ್ದರು.
Published on

ಗುಳೇದಗುಡ್ಡ: ಸೈನಿಕರು ದೇಶ ಕಾಯುವ ಜವಾಬ್ದಾರಿ ಹೊತ್ತು, ತಮ್ಮ ಜೀವನ ಮುಡುಪಾಗಿಟ್ಟು ಕುಟುಂಬದಿಂದ ದೂರ ಉಳಿದು ಬದುಕುವ ಯೋಧರ ಕಾರ್ಯ ಶ್ಲಾಘನೀಯ ಎಂದು ಮುರುಘಾಮಠದ ಕಾಶೀನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಭಾನುವಾರ ಭಾರತೀಯ ನೌಕಾಪಡೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಆಗಮಿಸಿದ ಯೋಧ ಶಂಕರಲಿಂಗ ಸಂಗಪ್ಪ ಹಾವರಗಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೇಶದ ಗಡಿಯಲ್ಲಿ ನಮ್ಮ ಯೋಧರು ಹಗಲಿರುಳು ಗಡಿ ರಕ್ಷಣೆ ಮಾಡುತ್ತಿರುವುದರಿಂದಲೇ ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. ಮಕ್ಕಳಲ್ಲಿ ದೇಶಾಭಿಮಾನ, ದೇಶ ಪ್ರೇಮ ತುಂಬ ಬೇಕು. ಪಾಲಕರು ತಮ್ಮ ಮಕ್ಕಳನ್ನು ದೇಶ ಸೇವೆ ಕಳುಹಿಸಬೇಕು ಎಂದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಭಾಸ ಕೋಟಿ, ಈರಣ್ಣ ಪಟ್ಟಣಶೆಟ್ಟಿ, ನಾಗರಾಜ ಪಟ್ಟಣಶೆಟ್ಟಿ, ಶಿವಪ್ಪ ಯಡಹಳ್ಳಿ, ಚಂದ್ರು ಪಟ್ಟಣಶೆಟ್ಟಿ, ಕುಮಾರ ಪಟ್ಟಣಶೆಟ್ಟಿ, ಎಂ.ಬಿ. ಪಟ್ಟಣಶೆಟ್ಟಿ, ಮಹಾಂತೇಶ ಪಟ್ಟಣಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net