ಹೋರಾಟಗಾರರ ತ್ಯಾಗ ನಮಗೆಲ್ಲ ಸ್ಫೂರ್ತಿ

h13-mahesh college
Published on

ಹುಬ್ಬಳ್ಳಿ: ಸ್ವಾತಂತ್ರೊೃೀತ್ಸವ ನಿಮಿತ್ತ ಧಾರವಾಡ ಜಲ್ಲಾಡಳಿತ, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇಲ್ಲಿಯ ಕುಸುಗಲ್ ರಸ್ತೆ ಶಾಖೆಯ ಡಾ.ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಂಗಳವಾರ ಏರ್ಪಾಟಾಗಿತ್ತು.
ಮಂಜುನಾಥ ಮೇಟಿ, ಆನಂದಪ್ಪ ಜೋಗಿ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿಯೂ ಸ್ವಾತಂತ್ರೃಕ್ಕಾಗಿ ಬಹಳಷ್ಟು ಜನರು ಹೋರಾಟ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನಗಳು ನಮಗೆಲ್ಲ ಸ್ಫೂರ್ತಿಯಾಗಿವೆ. ಇತಿಹಾಸದ ಪುಟಗಳಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿವೆ ಎಂದರು.
ಅಧ್ಯಕ್ಷ ಮುತ್ತಪ್ಪ ಚಿಕ್ಕರಾಯ ಅವರು ಸ್ವಾತಂತ್ರೃದ ಮಹತ್ವ ತಿಳಿಸಿಕೊಟ್ಟರು.
ಆನಂದಪ್ಪ ಜೋಗಿ ಅವರ ಕಲಾ ತಂಡವು ಜಾನಪದ ಹಾಡು, ವಗಟು, ಗೀಗಿ ಪದ ಮತ್ತು ದೇಶ ಭಕ್ತೀ ಗೀತೆಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ಮನರಂಜಿಸಿತು.
ಸೌಮ್ಯಾ ಶಾಂತಗಿರಿ ನಿರೂಪಿಸಿದರು. ವೀರೇಶ ಬಿಜ್ಜರಗಿ ವಂದಿಸಿದರು. ಕಾಲೇಜಿನ ಮಾರ್ಕೆಟಿಂಗ್ ಮುಖ್ಯಸ್ಥ ರಾಜಣ್ಣ ಗುಡಿಮನಿ, ಉಪನ್ಯಾಸಕರಾದ ಶೋಭಾ, ಡಿ. ಶ್ರೀಕಾಂತ, ಓಲೀವಿಯಾ ಫರ್ನಾಡಿಸ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net