ಸೈನಿಕರ ತ್ಯಾಗಕ್ಕೆ ಬೆಲೆ ಕಟ್ಟಲಾಗದು

The sacrifice of soldiers cannot be put at a price.
ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮ ಬಸವನಬಾಗೇವಾಡಿ ತಾಲೂಕಿನ ಜೈನಾಪುಕ್ಕೆ ಆಗಮಿಸಿ ಯೋಧ ಬಸನಗೌಡ ಗೌಡಪ್ಪ ಪೋಲೀಸ್ ಅವರನ್ನು ತಾಲೂಕು ನಿವೃತ್ತ ಯೋಧರ ಸಂಘ, ಜೈನಾಪುರ ಯುವಸೇನೆ ಹಾಗೂ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ಎಸ್.ಬಿ.ಕೊಟ್ರಶೆಟ್ಟಿ, ಶಿವು ಅಡಗಿಮನೆ,ಸಿದ್ಧ್ದರಾಮಯ್ಯ ಹಿರೇಮಠ, ಈರಣ್ಣ ಪಟ್ಟಣಶೆಟ್ಟಿ ಇತರರಿದ್ದರು.
Published on

ಬಸವನಬಾಗೇವಾಡಿ: ದೇಶದ ಗಡಿ ಕಾಯುವ ಸೈನಿಕರ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ನಿವೃತ್ತ್ತ ಸೈನಿಕರ ಸಂಘ ತಾಲೂಕು ಘಟಕದ ಸದಸ್ಯರಾದ ಎಸ್.ಬಿ.ಕೊಟ್ರಶೆಟ್ಟಿ, ಶಿವು ಅಡಗಿಮನೆ ಹೇಳಿದರು.

ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತ್ತಿಯಾಗಿ ತವರೂರು ಬಸವನಬಾಗೇವಾಡಿ ತಾಲೂಕಿನ ಜೈನಾಪುರಗ್ರಾಮಕ್ಕೆ ಆಗಮಿಸಿದ ಯೋಧ ಬಸನಗೌಡ ಗೌಡಪ್ಪ ಪೊಲೀಸ್ ಅವರನ್ನು ತಾಲೂಕು ನಿವೃತ್ತ್ತ ಯೋಧರ ಸಂಘ, ಜೈನಾಪುರ ಯುವಸೇನೆ ಹಾಗೂ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಯೋಧನನ್ನು ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿಕೊಳ್ಳ್ಳಲಾಯಿತು.

ಬಸವನಬಾಗೇವಾಡಿ ಪಟ್ಟಣದ ಆರಾಧ್ಯದೈವ ಮೂಲ ನಂದೀಶ್ವರ ದೇವಸ್ಥಾನದಲ್ಲಿ ಕುಟುಂಬ ಸಮೇತ ಯೋಧ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ತಾಲೂಕು ನಿವೃತ್ತ್ತ ಸೈನಿಕರ ಸಂಘದಿಂದ ಹನುಮಾನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಗ್ರಾಮಸ್ಥರ ಪ್ರೀತಿ ವಿಶ್ವಾಸಕ್ಕೆ ಚಿರ ಋಣಿ ಎಂದರು.

ಪತ್ರಕರ್ತ ಬಸವರಾಜ ಉಳ್ಳಾಗಡ್ಡಿ, ಸಿದ್ಧ್ದರಾಮಯ್ಯ ಹಿರೇಮಠ, ಈರಣ್ಣ ಪಟ್ಟಣಶೆಟ್ಟಿ, ಪಿಂಟುಗೌಡ ಪಾಟೀಲ, ಯೋಧ ಬಸನಗೌಡರ ಕುಟುಂಬಸ್ಥರು, ಜೈನಾಪುರ ಯುವಸೇನೆ, ಗೆಳೆಯರ ಬಳಗ ಸದಸ್ಯರು ಹಾಗೂ ಗ್ರಾಮರ್ಸಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net