

ಮೂಡಿಗೆರೆ: ಶಿಕ್ಷಕ ವೃತ್ತಿ ಪವಿತ್ರವಾದುದು. ಕಲ್ಲನ್ನು ಕೆತ್ತಿ ಶಿಲೆಯನ್ನಾಗಿ ಮಾಡುವ ಶಿಲ್ಪಿಯಂತೆ ಶಿಕ್ಷಕರು ಮಕ್ಕಳನ್ನು ತಿದ್ದಿ ಬದುಕು ರೂಪಿಸಿಕೊಡುತ್ತಾರೆ ಎಂದು ಮುತ್ತಿಗೆಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಧು ಹೇಳಿದರು.
ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರು ಕರ್ತವ್ಯದಿಂದ ಹಿಂದೆ ಸರಿದರೆ ಸಮಾಜವನ್ನು ಸುಧಾರಣೆಗೆ ತರಲು ಸಾಧ್ಯವಿಲ್ಲ. ಸರ್ಕಾರ ನೀಡುವ ವೇತನಕ್ಕೆ ದುಪ್ಪಟ್ಟು ರೀತಿಯಲ್ಲಿ ಶಿಕ್ಷಕರು ಕೆಲಸ ನಿರ್ವಹಿಸುತ್ತಾರೆ. ಇಂಥ ಶಿಕ್ಷಕರಿಗೆ ಗೌರವ ಸಲ್ಲಿಸಬೇಕಾಗಿರುವುದು ಸಾರ್ವಜನಿಕರ ಕರ್ತವ್ಯ ಎಂದು ತಿಳಿಸಿದರು.
ಎಸ್‌ಡಿಎಂಸಿಯಿಂದ ಶಿಕ್ಷಕರನ್ನು ಗೌರವಿಸಲಾಯಿತು. ಎಸ್‌ಡಿಎಂಸಿ ಸದಸ್ಯರಾದ ದಿನೇಶ್, ರಾಜು ಪೂಜಾರಿ, ಸುಧೀರ್, ಸುನೀಲ್, ಗಿರೀಶ್ ಪೂಜಾರಿ, ನಾರಾಯಣ, ಪ್ರಸನ್ನ, ಶಿಕ್ಷಕರಾದ ಭಾರತಿ, ಸುರೇಶ್, ನಾಜಿಮಾ ಸಿದ್ದೀಕ್, ವಿಮಲಾ, ಮಂಜುಳಾ, ವಾಸುದೇವ್, ಹೇಮಲತಾ, ನಮಿತಾ, ಮಧುರಾ, ರಣಿತಾ, ನಿಗರ್ ಫಾತಿಮಾ, ಜೆಸಿತಾ, ಶ್ವೇತಾ, ಲತಾ, ಆಮೀನಾ, ವಿಲ್ಮಾ ಇತರರಿದ್ದರು.