ಕೋಟ್ಯಂತರ ಜನರಿಗೆ ಸೂರು ಕಲ್ಪಿಸಿಕೊಟ್ಟ ನಾಡಪ್ರಭು

ಮದ್ದೂರಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ಕೋಕಿಲಾಅರುಣ್ ಚಾಲನೆ ನೀಡಿದರು. ಡಾ.ಬಿ.ಜಯಪ್ರಕಾಶಗೌಡ, ಅಶೋಕ್‌ಜಯರಾಮು, ಡಾ.ಬಿ.ಕೃಷ್ಣ, ಡಿ.ಪಿ.ಶಿವಪ್ಪ, ಶಂಕರಯ್ಯ, ಶಿವಲಿಂಗಯ್ಯ ಇದ್ದರು.
ಮದ್ದೂರಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ಕೋಕಿಲಾಅರುಣ್ ಚಾಲನೆ ನೀಡಿದರು. ಡಾ.ಬಿ.ಜಯಪ್ರಕಾಶಗೌಡ, ಅಶೋಕ್‌ಜಯರಾಮು, ಡಾ.ಬಿ.ಕೃಷ್ಣ, ಡಿ.ಪಿ.ಶಿವಪ್ಪ, ಶಂಕರಯ್ಯ, ಶಿವಲಿಂಗಯ್ಯ ಇದ್ದರು.
Published on

ಮದ್ದೂರು: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಫಲವಾಗಿ ಬೆಂಗಳೂರು ಬೃಹದಾಕಾರವಾಗಿ ಬೆಳೆದಿದ್ದು, ಕೋಟ್ಯಂತರ ಜನರಿಗೆ ಉದ್ಯೋಗ, ಸೂರು ಕಲ್ಪಿಸಿಕೊಟ್ಟಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್ ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ತಾಲೂಕು ಸಂಘಟನೆ ವತಿಯಿಂದ  ಪಟ್ಟಣದ ಸಂಜಯ ವೃತ್ತದಲ್ಲಿ ಆಯೋಜಿಸಿದ್ದ 516ನೇ ಕೆಂಪೇಗೌಡ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನೂರಾರು ಕೆರೆ-ಕಟ್ಟೆ ಮತ್ತು ಪ್ರತ್ಯೇಕವಾಗಿ ಹಲವು ಪೇಟೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಎಲ್ಲರೂ ಬದುಕು ಕಟ್ಟಿಕೊಳ್ಳಲು ನಿರಂತರವಾಗಿ ಶ್ರಮಿಸಿದ ಮೇರು ವ್ಯಕ್ತಿ ಎಂದು ಬಣ್ಣಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು ಮಾತನಾಡಿ, ಕೆಂಪೇಗೌಡರು ವ್ಯಾಪಾರ, ಕುಡಿಯುವ ನೀರು, ವ್ಯವಸಾಯಕ್ಕೆ ಹೆಚ್ಚು ಒತ್ತು ನೀಡಿದರಲ್ಲದೆ, ಪ್ರಜೆಗಳ ಹಿತಚಿಂತನೆಯನ್ನು ಗಮನದಲ್ಲಿಟ್ಟುಕೊಂಡು ನೂರಾರು ಯೋಜನೆಗಳನ್ನು ಜಾರಿಗಳಿಸಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಜಿಲ್ಲೆಯಲ್ಲಿ 20 ಎಕರೆ ಜಮೀನನ್ನು ಗುರುತಿಸಿ ಮಕ್ಕಳಿಗೆ ಶಿಕ್ಷಣದ ಜತೆಗೆ ಹಲವು ಸೌಲಭ್ಯ ಕಲ್ಪಿಸಲು ಒಕ್ಕಲಿಗರ ಸಂಘ ಮುಂದಾಗಿದೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಅವರನ್ನು ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ವತಿಯಿಂದ ಗೌರವಿಸಲಾಯಿತು. ಒಕ್ಕಲಿಗರ ಸಂಘದ ನಿರ್ದೇಶಕರಾದ ಅಶೋಕ್‌ಜಯರಾಮು, ಮಂಡ್ಯ ಚಂದ್ರು, ಚುಂಚುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಡಿ.ಪಿ.ಶಿವಪ್ಪ, ಉಪಾಧ್ಯಕ್ಷ ಶಂಕರಯ್ಯ, ಪದಾಧಿಕಾರಿಗಳಾದ ವಿ.ಟಿ.ರವಿಕುಮಾರ್, ಸುರೇಶ್, ಮಾರಸಿಂಗನಹಳ್ಳಿ ರಾಮಚಂದ್ರು, ಜಿ.ಸಿ.ಮಹೆಶ್, ದೊರೆಸ್ವಾಮಿ, ಶಿವಕುಮಾರ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net