ಪುಣ್ಯಕ್ಷೇತ್ರದ ಪಾವಿತ್ರೃ ಕಾಪಾಡಿ

Untitled design (15)
Published on

ಗಂಗಾವತಿ: ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಯಲ್ಲಿ ಅಂಜನಾದ್ರಿ ಪರಿಸರ ಕೃಷಿ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಆಂದೋಲನ ಬುಧವಾರ ನಡೆಯಿತು.

ಆಂದೋಲನಕ್ಕೆ ಚಾಲನೆ ನೀಡಿದ ರಾಜವಂಶಸ್ಥೆ ಲಲಿತಾರಾಣಿರಾಯಲು ಮಾತನಾಡಿ, ಹನುಮ ಜನಿಸಿದ ನಾಡಿನಲ್ಲಿ ಸ್ವಚ್ಛತೆ ಆದ್ಯತೆ ನೀಡಬೇಕಿದ್ದು, ಪುಣ್ಯಕ್ಷೇತ್ರದ ಪಾವಿತ್ರ್ಯತೆಯತ್ತ ಭಕ್ತರು ಮತ್ತು ಪ್ರವಾಸಿಗರ ಗಮನಹರಿಸಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಬೇಕಿದ್ದು, ತ್ಯಾಜ್ಯದಿಂದ ಮುಕ್ತವಾಗಿಸಬೇಕಿದೆ. ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗೆ ಆದ್ಯತೆ ನೀಡಬೇಕಿದ್ದು, ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಸಂಸ್ಥೆ ಹಿರಿಯ ಪ್ರತಿನಿಧಿ ಪ್ರಸಾದ ಕಡೇಬಾಗಿಲು ಮಾತನಾಡಿದರು.

ಆಂದೋಲನದಲ್ಲಿ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳ ಬಳಕೆಯಿಂದ ಪರಿಸರ ಮತ್ತು ಆರೋಗ್ಯದ ಮೇಲಾಗುವ ಪರಿಣಾಮ ಕುರಿತು ಜಾಗೃತಿ ಮೂಡಿಸಲಾಯಿತು. 250ಕ್ಕೂ ಹೆಚ್ಚು ಸದಸ್ಯರು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡಿದ್ದರು.

ಕಲಾವಿದ ವಿಷ್ಣುತೀರ್ಥ ಜೋಶಿ ಆದಾಪುರ, ಪದಾಧಿಕಾರಿಗಳಾದ ಪ್ರಶಾಂತ, ಮಂಜುನಾಥ, ಬಾಲರಾಜು, ನಾರಾಯಣಪ್ಪ, ಮಾರುತಿ, ಬೀರಪ್ಪ, ಕುಮಾರ ಸೇರಿ ಮಹಿಳಾ ಪ್ರತಿನಿಧಿಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net