ಮೇಲ್ಛಾವಣಿ ಕುಸಿದು ಪಕ್ಕದ ಮನೆ ಬಾಲಕಿ ಸಾವು, ಅಟವಾಡಲು ತೆರಳಿದ್ದೆ ಜೀವಕ್ಕೆ ಮುಳುವಾಯ್ತು

9KND-03,,
Published on

ಕುಂದಗೋಳ: ಪಟ್ಟಣದ ಸಾದಗೇರಿ ಓಣಿಯಲ್ಲಿ ಸತತ ಮಳೆಯಿಂದ ನೆನೆದಿದ್ದ ಮನೆಯೊಂದು ಕುಸಿದುಬಿದ್ದ ಪರಿಣಾಮ ಆಟವಾಡಲು ತೆರಳಿದ್ದ ಪಕ್ಕದ ಮನೆಯ ಬಾಲಕಿ ಮೃತಪಟ್ಟು, ಮತ್ತೊಂದು ಮಗು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.

ಅಮೃತಾ ಗದಿಗೆಪ್ಪ ಮೆಣಸಗೊಂಡ (5) ಮೃತಪಟ್ಟ ಬಾಲಕಿ.

ನಾಗರ ಪಂಚಮಿಯಂದು ರಾಮಣ್ಣ ಅರ್ಕಸಾಲಿ ಎಂಬುವವರ ಮನೆಗೆ ಆಟವಾಡಲು ಬಾಲಕಿ ತೆರಳಿದ್ದಳು. ವಿಪರೀತ ಮಳೆಯಿಂದ ಮಣ್ಣಿನ ಮೇಲ್ಛಾವಣಿ ಬಾಲಕಿ ಮೇಲೆಯೇ ಕುಸಿದು ಬಿದ್ದಿದೆ. ಅದನ್ನು ಗಮನಿಸಿದ ಸ್ಥಳೀಯರು, ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಬಾಲಕಿ ಮೃತಪಟ್ಟಿದ್ದಳು.

ಅಮೃತಾ ಜತೆಗಿದ್ದ ನಿಹಾರಿಕಾ ಕಮ್ಮಾರ ಎಂಬ ಎರಡು ವರ್ಷದ ಬಾಲಕಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಘಟನೆ ಸ್ಥಳಕ್ಕೆ ತಹಸೀಲ್ದಾರ್ ರಾಜು ಮಾವರಕರ ಭೇಟಿ ನೀಡಿದರು. ಕುಸಿದು ಬಿದ್ದ ಅಕ್ಕಪಕ್ಕದ ಮನೆಯವರನ್ನು ಬೇರೆಡೆ ತೆರಳುವಂತೆ ಸೂಚಿಸಿದರು. ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಪ್ರಕೃತಿ ವಿಕೋಪದಡಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಕಂದಾಯ ನಿರೀಕ್ಷಕ ಅಶೋಕ ಮಲ್ಲೂರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ, ರಾಯಸಾಬ ಕಳ್ಳಿಮನಿ, ಕಲ್ಲಪ್ಪ ಉಗರಗೋಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net