ಪ್ರಜಾಪ್ರಭುತ್ವ ಯಶಸ್ಸಿಗೆ ಯುವಕರ ಪಾತ್ರ ಮುಖ್ಯ

ಯಲಬುರ್ಗಾ ತಾಲೂಕಿನ ಕುಡಗುಂಟಿ ಗ್ರಾಮದಲ್ಲಿ ಯುವಕರಿಗೆ ಸಾಮಾಜಿಕ ಸ್ವಾಸ್ಥ್ಯ, ವ್ಯಸನಮುಕ್ತ ಕಾರ್ಯಕ್ರಮವನ್ನು ವಕೀಲ ಬಸವರಾಜ ಬೊಮ್ಮನಾಳ ಉದ್ಘಾಟಿಸಿದರು. ಗ್ರಾಪಂ ಸದಸ್ಯ ದೇವಪ್ಪ ಲಗಳೂರ, ಶಿಕ್ಷಕಿ ಶಂಕ್ರಮ್ಮ ಸಂಗಟಿ, ಗ್ರಂಥಪಾಲಕಿ ಯಮುನಾ ನಡುಲಮನಿ, ವಿಸ್ತಾರ ಸಂಸ್ಥೆಯ ಸಂಯೋಜಕ ಧರ್ಮರಾಜ್ ಗೋನಾಳ ಇದ್ದರು.

Published on

ಯಲಬುರ್ಗಾ: ಭಾರತ ವಿಶ್ವದಲ್ಲೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರ. ಇಂಥ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ಸು ಕಾಣುವಲ್ಲಿ ಯುವ ಜನತೆ ಪಾತ್ರ ಮುಖ್ಯವಾದದ್ದು ಎಂದು ವಕೀಲ ಬಸವರಾಜ ಬೊಮ್ಮನಾಳ ಹೇಳಿದರು.

ತಾಲೂಕಿನ ಕುಡಗುಂಟಿ ಗ್ರಾಮದಲ್ಲಿ ವಿಸ್ತಾರ ಸಂಸ್ಥೆ, ಚಿಕ್ಕಮ್ಯಾಗೇರಿ ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವಕರಿಗೆ ಸಾಮಾಜಿಕ ಸ್ವಾಸ್ಥ್ಯ, ವ್ಯಸನಮುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಭ್ರಾತೃತ್ವ, ಪ್ರಜಾಪ್ರಭುತ್ವದ ಮೂಲ ಆಶಯಗಳಾಗಿವೆ. ಗ್ರಾಮ ಪರಿಕಲ್ಪನೆ, ಪರಿಸರ ಕಾಳಜಿ ಸೇರಿ ಸಮಾಜಮುಖಿ ಕಾರ್ಯಗಳಿಗೆ ವಿಸ್ತಾರ ಸಂಸ್ಥೆ ಕೊಡುಗೆ ಅಪಾರ ಎಂದರು.

ವಿಸ್ತಾರ ಸಂಸ್ಥೆಯ ಸಂಯೋಜಕ ಬಸವರಾಜ ಬಳಿಗೇರ ಮಾತನಾಡಿ, ಸಂಸ್ಥೆಯಿಂದ ಯಲಬುರ್ಗಾ, ಕುಕನೂರು ತಾಲೂಕಿನ ಮೂವತ್ತಕ್ಕೂ ಹೆಚ್ಚು ಗ್ರಾಮದಲ್ಲಿ ಯುವ ಸಬಲೀಕರಣ, ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಯುವಕರ ಪಾತ್ರ, ಮೊಬೈಲ್ಗೆ ದಾಸರಾಗಿರುವುದು, ಯುವಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.

ಗ್ರಾಪಂ ಸದಸ್ಯ ದೇವಪ್ಪ ಲಗಳೂರ, ಶಿಕ್ಷಕಿ ಶಂಕ್ರಮ್ಮ ಸಂಗಟಿ, ಗ್ರಂಥಪಾಲಕಿ ಯಮುನಾ ನಡುಲಮನಿ, ವಿಸ್ತಾರ ಸಂಸ್ಥೆಯ ಸಂಯೋಜಕ ಧರ್ಮರಾಜ್ ಗೋನಾಳ, ಪ್ರಮುಖರಾದ ಆರ್.ಮಾಲಾ, ಇಮಾಮಸಾಬ್ ಗುಳೇದಗುಡ್ಡ, ರಮೇಶ್ ಕುಡಗುಂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net