

ಬೆಟ್ಟದಪುರ: ಆಧುನಿಕ ಕಾಲದಲ್ಲಿ ಸಮಾಜದ ಬದಲಾವಣೆಯಲ್ಲಿ ಯುವ ಸಮೂಹದ ಪಾತ್ರ ಮಹತ್ವವಾಗಿದೆ ಎಂದು ಬೆಂಗಳೂರಿನ ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಎಸ್‌ಎಂಎಸ್ ವಿದ್ಯಾಸಂಸ್ಥೆಯಿಂದ ಗುರುವಾರ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಲ್ಲಿ ಸಿಗುವಂತಹ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಸಮಾಜದ ಬದಲಾವಣೆ ತರುವುದಕ್ಕೆ ಅಡಿಪಾಯ ಹಾಕಲು ಸಾಧ್ಯ. ಅದಲ್ಲದೆ ಭವ್ಯ ಭಾರತದ ನಿರ್ಮಾಣದಲ್ಲಿಯೂ ಕೂಡ ಯುವಕರ ಪಾತ್ರ ಮಹತ್ವದ್ದಾಗಿದೆ. ದೇಶದ ಭವಿಷ್ಯ ಯುವಕರನ್ನೇ ಅವಲಂಬಿಸಿದೆ.
ವಕರು ರಾಷ್ಟ್ರದ ಸಂಪತ್ತು. ಯುವಶಕ್ತಿ ಸದ್ಬಳಕೆಯಿಂದ ಬಲಿಷ್ಠ ಹಾಗೂ ಸದೃಢ, ಸುಸಂಸ್ಕೃತ ಹಾಗೂ ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಸಾಧ್ಯ. ಯುವಶಕ್ತಿ ಈ ದೇಶದ ಭವಿಷ್ಯದ ಸಮೃದ್ಧಿಯ ಸಂಕೇತ. ಯುವಶಕ್ತಿ ಜಾಗೃತವಾದರೆ ಮಾತ್ರ ದೇಶ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯವಾಗುತ್ತೆ ಎಂದರು.
ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಎಸ್‌ಎಂಎಸ್ ವಿದ್ಯಾಸಂಸ್ಥೆ ಕಾರ್ಯಾಧ್ಯಕ್ಷ ಬಿ.ವಿ ಮಂಜುನಾಥ್, ಕಾರ್ಯದರ್ಶಿ ಎ.ವಿ ಛಾಯಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಸ್ವಾಮಿ, ಉಪಾಧ್ಯಕ್ಷೆ ಸುನೀತಾ ಮಂಜು, ಸದಸ್ಯರಾದ ಸಿ.ಕೆ ವೆಂಕಟೇಶ್, ಸಿ.ಪಿ ಸುರೇಶ, ಸಿ.ಎಸ್.ಗಣೇಶ್, ಸರಸ್ಪತಿ ಅರುಣ್, ಪ್ರೇಮಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎ ನಂದೀಶ್, ಉಪಾಧ್ಯಕ್ಷೆ ಅನಿತಾ ರಮೇಶ್, ಮುಖ್ಯಶಿಕ್ಷಕ ಶಿವನಂದ್, ಕಸಾಪ ಗ್ರಾಮ ಘಟಕ ಅಧ್ಯಕ್ಷ ಮುಕುಂದಾಚಾರಿ, ಡೇರಿ ಕಾರ್ಯದರ್ಶಿ ನಂದೀಶ್, ಮುಖಂಡರಾದ ಸಿ.ಎನ್.ಕಾಳೇಗೌಡ, ಪುಟ್ಟಸ್ವಾಮಿಗೌಡ, ಪ.ಕಾಳೇಗೌಡ, ಭಾರತಿ, ಶ್ರೀನಿವಾಸ್, ಸಿ.ಕೆ.ಕೃಷ್ಣೇಗೌಡ, ಜಗದೀಶ, ಗಿರೀಗೌಡ, ಸಂತೋಷ್, ಪ್ರಾಂಶುಪಾಲ ರಾಜು, ಶಿಬಿರಾಧಿಕಾರಿ ಕುಬೇರ್, ಉಪನ್ಯಾಸಕರಾದ ಸತೀಶ್, ಯಶವಂತ್, ಹರ್ಷಿತ ಸೇರಿದಂತೆ ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಇದ್ದರು.