ಅಭಿವೃದ್ಧಿಗೆ ಕಾರ್ಮಿಕರ ಪಾತ್ರ ಹಿರಿದು

1MNL1
Published on

ಮುನವಳ್ಳಿ: ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಭಾವದಿಂದ ತಮ್ಮೆಲ್ಲ ಕಷ್ಟ ನುಂಗಿ, ಶ್ರಮಜೀವಿಗಳಾಗಿ ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಹಿರಿದಾಗಿದೆ. ಕಾರ್ಮಿಕರ ಶ್ರಮವನ್ನು ಗೌರವಿಸಿ ಅವರಿಗೆ ಕತಜ್ಞತೆ ಸಲ್ಲಿಸಬೇಕು ಎಂದು ಸಹಕಾರಿ ಧುರೀಣ ಉಮೇಶ ಬಾಳಿ ಹೇಳಿದರು.

ಪಟ್ಟಣದ ಜೈಂಟ್ಸ್ ಗ್ರೂಪ್ ಆ್ ಮುನವಳ್ಳಿ ವತಿಯಿಂದ ಈಚೆಗೆ ವಿಶ್ವ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪಟ್ಟಣದ ಕಾರ್ಮಿಕ ವರ್ಗದವರಿಗಾಗಿ ಹಮ್ಮಿಕೊಂಡಿದ್ದ ಸಿಹಿ ಮತ್ತು ವಸಗಳ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಜೈಂಟ್ಸ್ ಗ್ರೂಪ್ ಅಧ್ಯಕ್ಷ ಭುಜಂಗರಾವ್ ನಿಕ್ಕಂ ಮಾತನಾಡಿ, ಕಾರ್ಮಿಕರನ್ನು ಕೇವಲ ಕೆಲಸಗಾರರನ್ನಾಗಿ ನೋಡಬಾರದು. ಅವರ ಮೇಲೆ ಗೌರವ ಭಾವನೆ ಇರಬೇಕು ಎಂದರು.

ಜೈಂಟ್ಸ್ ಗ್ರೂಪ್ ನಿರ್ದೇಶಕ ಸಂಜೀವಕುಮಾರ ತುಳಜಣ್ಣವರ, ಅಶೋಕ ಪಟ್ಟಣಶೆಟ್ಟಿ, ಡಾ.ಎಂ.ಬಿ. ಅಷ್ಟಗಿಮಠ, ಶಿವಾಜಿ ಮಾನೆ, ಎಸ್.ಬಿ. ಗಂಗಾವತಿ, ಆಡಳಿತ ನಿರ್ದೇಶಕ ಬಾಳು ಹೊಸಮನಿ ಹಾಗೂ ಕಾರ್ಮಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net