ಕಾಫಿ ಉದ್ಯಮದಲ್ಲಿ ಮಹಿಳೆಯರ ಪಾತ್ರ ಅಗಾಧ

13 ¸skpp 1--
ಸಕಲೇಶಪುರದ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಚೇರಿಯಲ್ಲಿ ಶನಿವಾರ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭ ಆಯೋಜಿಸಲಾಗಿತ್ತು. ಆಶಾ ಶಶಿಧರ್, ಚಂದ್ರಕಲಾ ಕಾಂತರಾಜ್, ಜಯಶ್ರೀ ವಿಶ್ವೇಶರ್, ನಂದಿತಾ ಧರ್ಮರಾಜ್, ನಂದರಾಜ್ ಶೇಖರ್, ಶ್ರುತಿ ಕಾನಹಳ್ಳಿ, ಕಾವ್ಯಾ, ಕೃತಿ ಇತರರು ಇದ್ದರು.
Published on

ಸಕಲೇಶಪುರ: ಕಾಫಿ ಉದ್ಯಮದಲ್ಲಿ ಮಹಿಳೆಯರ ಪಾತ್ರ ಅಗಾಧವಾಗಿದೆ ಎಂದು ವುಮನ್ ಕಾಫಿ ಪ್ರಮೋಷನ್ ಕೌನ್ಸಿಲ್ ಸಂಸ್ಥಾಪಕ ಅಧ್ಯಕ್ಷೆ ಆಶಾ ಶಶಿಧರ್ ಹೇಳಿದರು.

ಪಟ್ಟಣದ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಮಾತನಾಡಿ, ಕಾಫಿ ಉದ್ಯಮ ವ್ಯಾಪಕವಾಗಿ ಬೆಳೆಯಲು ಮಹಿಳೆಯರ ಶ್ರಮ ಸಾಕಷ್ಟಿದ್ದು ತೋಟದಿಂದ ಮಾರುಕಟ್ಟೆವರೆಗೆ ಮಹಿಳೆಯರು ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

ಆಂತರಿಕ ಕಾಫಿ ಮಾರುಕಟ್ಟೆ ಸೃಷ್ಟಿಗಾಗಿ ಹುಟ್ಟುಹಾಕಲಾದ ವುಮನ್ ಕಾಫಿ ಪ್ರೋಮೋಷನ್ ಕೌನ್ಸಿಲ್ ವರ್ಷದಿಂದ ವರ್ಷಕ್ಕೆ ಹಲವು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಸಂಘಟನೆಯಾಗಿ ಬೆಳೆಯುತ್ತಿದ್ದು ಈ ಸಂಘಟನೆಗೆ ಯುವ ಮಹಿಳೆಯರ ಪ್ರವೇಶ ಮಾಡುವುದರ ಮೂಲಕ ಸಂಘಟನೆಗೆ ಮತ್ತಷ್ಟು ಬಲ ನೀಡಿದೆ ಎಂದರು.

ಮಾಜಿ ಅಧ್ಯಕ್ಷೆ ಚಂದ್ರಕಲಾ ಕಾಂತರಾಜ್ ಮಾತನಾಡಿ, ಸಂಸ್ಥೆ ರಜತ ಮಹೋತ್ಸವ ಆಚರಿಸುವ ಹೊಸ್ತಿನಲ್ಲಿದ್ದು ಸಂಘಟನೆ ಮತ್ತಷ್ಟು ವಿಸ್ತಾರವಾಗಿ ಬೆಳೆಯುವ ಮೂಲಕ ಕಾಫಿಗೆ ತನ್ನದೇ ಆದ ಪರಂಪರೆಯನ್ನು ಸೃಷ್ಟಿಸಬೇಕು ಎಂದು ಹೇಳಿದರು.

2025-2026ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷೆ ಜಯಶ್ರೀ ವಿಶ್ವೇಶರ್, ಉಪಾಧ್ಯಕ್ಷರಾಗಿ ನಂದಿತಾ ಧರ್ಮರಾಜ್, ಕಾರ್ಯದರ್ಶಿಯಾಗಿ ನಂದರಾಜ್ ಶೇಖರ್, ಖಜಾಂಚಿಯಾಗಿ ಶ್ರುತಿ ಕಾನಹಳ್ಳಿ, ಸಾರ್ವಜನಿಕ ಸಂಪರ್ಕ ಪ್ರತಿನಿಧಿಯಾಗಿ ಕಾವ್ಯಾ, ಸಹ ಕಾರ್ಯದರ್ಶಿಯಾಗಿ ಕೃತಿ ಅವರು ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net