ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅಪಾರ

The role of women in building society is immense.
ಗುಳೇದಗುಡ್ಡದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾಲಾ ತಾಂಡೂರ, ಗಾಯಿತ್ರಿ ರಾಜನಾಳ, ಜಯಶ್ರೀ ಅಂಕದ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷೆ ಭಾಗ್ಯಾ ಉದ್ನೂರ, ತಾರಾಮತಿ ರೋಜಿ, ನಾಗರತ್ನಾ ಎಣ್ಣಿ, ವೇದಾ ಶೀಪ್ರಿ, ಶಶಿಕಲಾ ಭಾವಿ, ಅನಸೂಯಾ ಅಲದಿ, ಮೀನಾಕ್ಷಿ ಜಿಡಗಿ, ಮಂಜುಳಾ ತಿಪ್ಪಾ, ಸ್ವರೂಪಾ ಜವಳಿ, ರೇಖಾ ತಿಪ್ಪಾ, ಪ್ರಿಯಾ ಜವಳಿ, ವಿಜಯಲಕ್ಷ್ಮೀ ರಾಜನಾಳ ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ: ಆದರ್ಶ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಮೂಡಿಸುವ ಹೆಣ್ಣು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ಅಮೋಘ ಸಾಧನೆ ಮಾಡಿದ್ದಾಳೆ ಎಂದು ಶ್ರೀ ಶಾರದಾ ಸಂಸ್ಕೃತ ಶಾಠಶಾಲೆ ಶಿಕ್ಷಕಿ ಮಾಲಾ ತಾಂಡೂರ ಹೇಳಿದರು.

ಸ್ಥಳೀಯ ಮರಡಿ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆ ಅಬಲೆಯಲ್ಲ. ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲು ಇಟ್ಟು ಸಾಕಷ್ಟು ಪ್ರಗತಿ ಸಾಧಿಸಿ ಮಾದರಿಯಾಗಿದ್ದಾಳೆ. ಗಂಡಿನ ಸಾಧನೆ ಹಿಂದೆ ಹೆಣ್ಣಿನ ಶ್ರಮವಿದೆ ಎನ್ನುವುದನ್ನು ಯಾವತ್ತೂ ಮರೆಯಬಾರದು ಎಂದರು.

ಪ್ರಾಧ್ಯಾಪಕಿ ಗಾಯಿತ್ರಿ ರಾಜನಾಳ ಮಾತನಾಡಿ, ಹೆಣ್ಣೊಂದು ಕಲಿತರೆ ಮನೆಯೊಂದು ಕಲಿತಂತೆ ಎನ್ನುವ ಮಾತಿನಂತೆ ಮನೆಯಲ್ಲಿ ಸಂಸ್ಕಾರ, ಸಂಸ್ಕೃತಿಗೆ ಅವಳ ಕೊಡುಗೆ ಅಪಾರ. ಅವಳು ಸಾಧನೆಯಲ್ಲಿ ಭೂಮಿಯಿಂದ ಆಕಾಶದವರೆಗೆ ಬೆಳೆದು ನಿಂತಿದ್ದಾಳೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷೆ ಭಾಗ್ಯಾ ಉದ್ನೂರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಕೀಯ, ಸಾಮಾಜಿಕ ರಂಗದಲ್ಲಿ ಮಹಿಳೆ ಸಾಧನೆ ಅಪಾರವಾಗಿದೆ. ಪ್ರತಿಯೊಬ್ಬರೂ ಮಹಿಳೆಗೆ ಗೌರವ ನೀಡಬೇಕು. ಮಹಿಳೆಯನ್ನು ಗೌರವಿಸುವ ಮನೆಗಳು ಪ್ರಗತಿ ಸಾಧಿಸುತ್ತವೆ ಎಂದರು.

ಪಟ್ಟಸಾಲಿ ನೇಕಾರ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಗೌರಮ್ಮ ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಮಾಲಾ ತಾಂಡೂರ, ಗಾಯಿತ್ರಿ ರಾಜನಾಳ, ಜಯಶ್ರೀ ಅಂಕದ ಅವರನ್ನು ಸನ್ಮಾನಿಸಲಾಯಿತು.

ತಾರಾಮತಿ ರೋಜಿ, ನಾಗರತ್ನಾ ಎಣ್ಣಿ, ವೇದಾ ಶೀಪ್ರಿ, ಶಶಿಕಲಾ ಭಾವಿ, ಅನಸೂಯಾ ಅಲದಿ, ಮೀನಾಕ್ಷಿ ಜಿಡಗಿ, ಮಂಜುಳಾ ತಿಪ್ಪಾ, ಸ್ವರೂಪಾ ಜವಳಿ, ರೇಖಾ ತಿಪ್ಪಾ, ಪ್ರಿಯಾ ಜವಳಿ, ವಿಜಯಲಕ್ಷ್ಮೀ ರಾಜನಾಳ, ಸುನಂದಾ ರೋಜಿ, ಸುವರ್ಣಾ ತಟ್ಟಿ, ವೈಶಾಲಿ ಮೆಂತೆದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net