ದೇಶದ ಪ್ರಗತಿಯಲ್ಲಿ ಯುವ ಸಮೂಹದ ಪಾತ್ರ ಪ್ರಮುಖ

24 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ದೇಶದ ಪ್ರಗತಿಯಲ್ಲಿ ಯುವ ಸಮೂಹದ ಪಾತ್ರ ಬಹಳ ಇದೆ. ಇಂದಿನ ಯುವಕರು ನಾಯಕತ್ವದಂತಹ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ಕರ್ನಾಟಕ ಕಲಾ ಕಾಲೇಜು ಮತ್ತು ವಿದ್ಯಾರ್ಥಿ ಕಲ್ಯಾಣ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ತರಗತಿಯಿಂದ ರಾಜಕೀಯ ಅಭಿಯಾನದವರೆಗೆ: ವಿದ್ಯಾರ್ಥಿಗಳ ರಾಜಕೀಯ ಒಳಗೊಳ್ಳುವಿಕೆ' ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇಂದಿನ ಯುವ ಸಮುದಾಯವು ರಾಜಕೀಯದತ್ತ ಒಲವು ತೋರಿಸುವ ಅಗತ್ಯವಿದೆ. ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟçಪತಿಯಾಗಿ ದೇಶಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಪ್ರಸ್ತುತ ದೇಶದ ರಾಜಕೀಯದಲ್ಲಿ ಶೇ. 65ರಷ್ಟು ಯುವ ಸಮುದಾಯವು ಸಂಸದರಾಗಿದ್ದಾರೆ. ಪ್ರಸ್ತುತ ರಾಜಕಾರಣ ಕೇವಲ ಶ್ರೀಮಂತರಿಗೆ ಮಾತ್ರ ಎಂಬ0ತಾಗಿರುವುದು ನೋವಿನ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಮಾತನಾಡಿ, ರಾಜಕಾರಣ ನಿಷ್ಠೆ, ದಕ್ಷತೆ ಮತ್ತು ಅರ್ಪಣಾ ಮನೋಭಾವ ಹೊಂದುವ ಅವಶ್ಯಕತೆ ಇದೆ ಎಂದರು.

ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ವಿಭಾಗದ ಅಧಿಕಾರಿ ಡಾ. ವೀರೇಂದ್ರ ಯಾದವ, ಐಕ್ಯೂಎಸಿ ಸಂಯೋಜಕ ಡಾ. ಐ.ಸಿ. ಮುಳಗುಂದ, ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಮುಕುಂದ ಲಮಾಣಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net