ಜನರ ಧ್ವನಿಯಾಗಿ ಮಾಧ್ಯಮಗಳ ಪಾತ್ರ ಪ್ರಮುಖ

The role of the media as the voice of the people is important
ಆಲಮಟ್ಟಿಯಲ್ಲಿ ಮಂಜಪ್ಪ ಹರ್ಡೇಕರ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ, ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ತಹಸೀಲ್ದಾರ್​ ಎ.ಡಿ. ಅಮರವಾದಗಿ, ಸಿದ್ದರೇಣುಕ ಸ್ವಾಮೀಜಿ, ಮಲ್ಲಿಕಾರ್ಜುನಯ್ಯ ತೊರಗಲ್ಲಮಠ, ಮೋಹನ ಕುಲಕರ್ಣಿ ಇತರರಿದ್ದರು.
Published on

ಆಲಮಟ್ಟಿ: ದೇಶದಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಗಳಿಗೆ ಜನರ ಧ್ವನಿಯಾಗಿ ಸಮಾಜದ ಸ್ವಾಸ್ಥಕಾಪಾಡುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾನೀಯ. ಪತ್ರಕರ್ತರು ದಿನನಿತ್ಯ ಒತ್ತಡ, ಹೆದರಿಸುವವರ ಮಧ್ಯದಲ್ಲಿ ಯಾವುದಕ್ಕೂ ಅಂಜದೆ ಅಳುಕದೆ ಸುದ್ದಿ ಮಾಡುವುದು ಶ್ಲಾನೀಯ ಎಂದು ತಹಸೀಲ್ದಾರ್​ ಎ.ಡಿ. ಅಮರವಾದಗಿ ಹೇಳಿದರು.

ಇಲ್ಲಿನ ಮಂಜಪ್ಪ ಹರ್ಡೇಕರ ಅವರ ಸ್ಮಾರಕ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂ ನಿಡಗುಂದಿ ತಾಲೂಕು ಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ನಡೆದ ಟನೆಯನ್ನು ಕಣ್ಮುಂದೆಯೇ ನಡೆದಿದೆ ಎನ್ನುವಂತೆ ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸುವಲ್ಲಿ ಮಾಧ್ಯಮಗಳ ಪಾತ್ರ ಅತಿ ಮಹತ್ವದ್ದಾಗಿದೆ ಎಂದರು.

ಚಿಮ್ಮಲಗಿಯ ಅರಳೆಲೆಕಟ್ಟಿಮನಿ ಹಿರೇಮಠದ ಸಿದ್ದರೇಣುಕ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಅಂಗಗಳು ದಾರಿ ತಪ್ಪಿದಾಗ ಅವುಗಳನ್ನು ಎಚ್ಚರಿಸುವ ಅಂಗವೇ ಪತ್ರಿಕಾರಂಗ. ಪತ್ರಿಕೆ ಕೇವಲ ಒಂದು ಕಾಗದವಲ್ಲ ಅದರಲ್ಲಿ ಉದ್ಯಮ ನಂಬಿದವರ ಬದುಕು ಅಡಗಿರುತ್ತದೆ ಎಂದು ಹೇಳಿದರು.

ವರದಿಗಾರ ಶ್ರೀಶೈಲ ಬಿರಾದಾರ, ಪತ್ರಕರ್ತ ಜಿ.ಸಿ. ಮುತ್ತಲದಿನ್ನಿ, ರಾಷ್ಟ್ರೀಯ ಮಾಧ್ಯಮ ಮಂಡಳಿಯ ಸದಸ್ಯ ಮಹೇಶ ಶಟಗಾರ, ಬಿ.ಟಿ. ಗೌಡರ ಮಾತನಾಡಿದರು. ಕಾನಿಪ ಸಂದ ನಿಡಗುಂದಿ ತಾಲೂಕು ಟಕದ ಅಧ್ಯ ಮಲ್ಲಿಕಾರ್ಜುನಯ್ಯ ತೊರಗಲ್ಲಮಠ ಅಧ್ಯತೆ ವಹಿಸಿದ್ದರು.

ಬೀರಪ್ಪ ಬೆನ್ನೂರ ಹಾಗೂ ಮಹಿಬೂಬ ವಾಲಿಕಾರ ಅವರಿಗೆ ತಾಲೂಕು ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್​ಎಸ್​ಎಲ್​ಸಿ ಪರೀೆಯಲ್ಲಿ ತಾಲೂಕಿನ ಕೀರ್ತಿ ಹೆಚ್ಚಿಸಿದ ಈರಮ್ಮ ಚಳಗೇರಿ ಹಾಗೂ ಸಿದ್ದು ಉಪ್ಪಲದಿನ್ನಿ ಅವರನ್ನು ಸನ್ಮಾನಿಸಲಾಯಿತು.

ಆಲಮಟ್ಟಿ ಯೋಜನಾ ಶಾಖೆ ಅಧ್ಯ ಸದಾಶಿವ ದಳವಾಯಿ, ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಹುಲ್​ ಆಪ್ಟೆ, ಗ್ರಾಪಂ ಅಧ್ಯೆ ಕವಿತಾ ಬಡಿಗೇರ, ಪಿಎಸ್​ಐ ಎ್​.ಎಸ್​.ಇಂಡಿಕರ, ಶಿಣ ಸಂಯೋಜಕ ಯು.ವೈ.ಬಶೆಟ್ಟಿ, ಎಂ.ಎಚ್​.ಎಂ. ಮುಖ್ಯೋಪಾಧ್ಯಾಯ ಎಸ್​.ಐ.ಗಿಡ್ಡಪ್ಪಗೋಳ ಇದ್ದರು. ಪತ್ರಕರ್ತ ಶಂಕರ ಜಲ್ಲಿ ಸ್ವಾಗತಿಸಿದರು. ಜಿ.ಎಂ.ಹಿರೇಮಠ ಪ್ರಾರ್ಥಿಸಿದರು. ಮಹೇಶ ಅಡಾಳಿ ನಿರೂಪಿಸಿದರು. ಮಹ್ಮದಅಲಿ ಮಕಾನದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net