ಶಿಕ್ಷಕರ ಪಾತ್ರ ಅವಿಸ್ಮರಣೀಯ

9RAM4
Published on

ರಾಮದುರ್ಗ: ಶಿಕ್ಷಕರು ಉತ್ತಮ ಸಂಸ್ಕಾರ ನೀಡಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸುತ್ತಾರೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲೂ ಶಿಕ್ಷಕರ ಪಾತ್ರ ಅವಿಸ್ಮರಣೀಯ ಎಂದು ನಿವೃತ್ತ ಪ್ರಾಧ್ಯಾಪಕ ಎಸ್​.ಲೇಪಾ ಹೇಳಿದರು.

ಪಟ್ಟಣದ ಪಾಲರೇಶಾ ಕಣ್ಣಿನ ಆಸ್ಪತ್ರೆಯಲ್ಲಿ ಲಯನ್ಸ್​ ಸಂಸ್ಥೆ ನೇತೃತ್ವದಲ್ಲಿ ಈಚೆಗೆ ಶಿಕರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಆದರ್ಶ ಶಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಲಯನ್ಸ್​ ಸಂಸ್ಥೆಯ ಜಿಲ್ಲಾ ಚೇರ್ಮನ್​ ವೆಂಕಟೇಶ ಹಿರೇರಡ್ಡಿ ಮಾತನಾಡಿ, ಲಯನ್ಸ್​ ಸಂಸ್ಥೆ ಸ್ಥಾಪನೆಯಾಗಿ 53 ವರ್ಷಗಳಾಗಿವೆ. ಇಲ್ಲಿಯವರೆಗೂ 100ಕ್ಕೂ ಅಧಿಕ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು, 30ಸಾವಿರಕ್ಕೂ ಅಧಿಕ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಈ ಸೇವೆ ನಿರಂತರ ಮುಂದುವರೆಯಲಿದೆ ಎಂದರು.

ಕಾಲೇಜು ವಿಭಾಗದಿಂದ ಪ್ರೋ.ಆರ್​.ಬಿ.ಸವಟಗಿ, ಹೈಸ್ಕೂಲ್​ ವಿಭಾಗದಿಂದ ವೈ.ವಿ.ಮಳಲಿ, ಎ.ಬಿ.ಚಿತ್ತರಗಿ, ಪ್ರಾಥಮಿಕ ವಿಭಾಗದಿಂದ ರಂಗವ್ವ ಮುರಕಟ್ನಾಳ, ಮಹಾದೇವಿ ಬಾಣಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಟ್ರಸ್ಟ್​ ಚೇರ್ಮನ್​ ಆರ್​.ಸಿ.ತ್ತೇಪುರ, ಕಾರ್ಯದರ್ಶಿ ರಂಜನಾ ದಿಂಡವಾರ, ಖಜಾಂಚಿ ಡಾ.ವೈಶಾಲಿ ಸಂಕನಗೌಡ್ರ, ಎ.ಜಿ.ಮಳಗಲಿ, ಬಿ.ಪಿ.ಅರಳಿಮಟ್ಟಿ ಇತರರಿದ್ದರು. ಲಯನ್ಸ್​ ಸಂಸ್ಥೆಯ ಅಧ್ಯೆ ಸರಳಾ ತ್ತೇಪುರ ಸ್ವಾಗತಿಸಿದರು. ಪ್ರೋ.ಎಸ್​.ಎಂ.ಸಕ್ರಿ ನಿರೂಪಿಸಿದರು. ಶಾಂತಾ ಅರಳಿಮಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net