ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ndg 18-1 english
ನಿಡಗುಂದಿಯ ಜಿವಿವಿಎಸ್ ಕಾಲೇಜು ಆವರಣದಲ್ಲಿ ಜಿವಿವಿಎಸ್ ಆಂಗ್ಲ ಮಾಧ್ಯಮ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು. ಜಿವಿವಿಎಸ್ ಸಮೂಹ ಸಂಸ್ಥೆ ಚೇರ್ಮನ್ ಸಿದ್ದಣ್ಣ ನಾಗಠಾಣ, ಶಿಕ್ಷಕ ಅಶೋಕ ಹಂಚಲಿ ಇತರರಿದ್ದರು.
Published on

ನಿಡಗುಂದಿ: ಶಿಕ್ಷಣ ಯಶಸ್ಸಿನ ಅತ್ಯಂತ ದೊಡ್ಡ ನಿರ್ಣಾಯಕ ಅಂಶವಾಗಿದೆ. ಪ್ರಸ್ತುತ ಸಮಯದಲ್ಲಿ ಗುಣಮಟ್ಟದ ಶಿಕ್ಷಣ ಜಗತ್ತನ್ನು ಬದಲಾಯಿಸುವ ಸಾಧನವಾಗಿದೆ. ಆ ದಿಶೆಯಲ್ಲಿ ಜಿವಿವಿಎಸ್ ಸಂಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡುತ್ತಿದೆ ಎಂದು ಜಿವಿವಿಎಸ್ ಸಮೂಹ ಸಂಸ್ಥೆ ಚೇರ್ಮನ್ ಸಿದ್ದಣ್ಣ ನಾಗಠಾಣ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸಂಜೆ ಜಿವಿವಿಎಸ್ ಕಾಲೇಜು ಆವರಣದಲ್ಲಿ ಜಿವಿವಿಎಸ್ ಆಂಗ್ಲ ಮಾಧ್ಯಮ ಹಮ್ಮಿಕೊಂಡ ವಾರ್ಷಿಕ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ಸಹಕಾರವನ್ನು ಪೋಷಕರು ಶಿಕ್ಷಕರಿಗೆ ವಹಿಸುವ ಜತೆಗೆ ಮಕ್ಕಳನ್ನು ದೈನಂದಿನ ಚಟುವಟಿಕೆ ಮೇಲೆ ನಿಗಾಯಿಟ್ಟು ಅವರಲ್ಲಿ ಕಲಿಕಾ ಸಾಮರ್ಥ ತುಂಬಬೇಕು. ಪೋಷಕರು ಹಾಗೂ ಶಿಕ್ಷಕರು ಜಂಟಿಯಾಗಿ ಕಾರ್ಯ ಮಾಡಿದರೆ ಮಕ್ಕಳು ಸತ್ಪ್ರಜೆಗಳಾಗಲು ಸಾಧ್ಯವಾಗಲಿದೆ ಎಂದರು.

ಶಿಕ್ಷಕ ಅಶೋಕ ಹಂಚಲಿ ಮಾತನಾಡಿದರು.

ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಪಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ ಮಾತನಾಡಿದರು.

ಸಂಸ್ಥೆ ಕಾರ್ಯದರ್ಶಿ ಬಸವರಾಜ ಮುಚ್ಚಂಡಿ, ಸಂಸ್ಥೆ ನಿರ್ದೇಶಕ ಡಾ. ಅನುಪ್ ನಾಗಠಾಣ, ಉದಯಕುಮಾರ ಬಶೆಟ್ಟಿ, ಮುಖ್ಯಶಿಕ್ಷಕ ಆರ್. ಮಂಜುಳಾ, ಬಿ.ವೈ. ಕೊಳದಾನೂರ ಸೇರಿ ಶಿಕ್ಷಕ ಸಿಬ್ಬಂದಿ ಇದ್ದರು.

ಬಳಿಕ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net